2 ಗುಡಿಸಲಿಗೆ ಬೆಂಕಿ ತಗುಲಿ ಲಕ್ಷಾಂತರ ರೂ.ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

huliyar

ಹುಳಿಯಾರು, ಫೆ.4- ಎರಡು ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಹುಳಿಯಾರು ಸಮೀಪದ ವೈ.ಎಸ್.ಪಾಳ್ಯದಲ್ಲಿ ನಡೆದಿದೆ.  ವೈ.ಎಸ್.ಪಾಳ್ಯ ವಾಸಿ ಮುಬಾರಕ್ ಹಾಗೂ ಅಮೀರ್ ಜಾನ್ ಎಂಬುವವರ ಗುಡಿಸಲು ಭಸ್ಮವಾಗಿದೆ. ಬೆಂಕಿ ತಗುಲಿರುವ ವಿಷಯ ಅಕ್ಕ ಪಕ್ಕದ ಮನೆಯವರಿಗೆ ತಿಳಿದು ಅಲ್ಲಿನ ಮಹಿಳೆಯರು ಮಕ್ಕಳು ಸೇರಿ ನೀರು, ಮಣ್ಣು ಸುರಿದರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಎರಡೂ ಮನೆಯ ದಿನಸಿ, ಬಟ್ಟೆ, ಪಾತ್ರೆ ಸೇರಿದಂತೆ ಜೀವನ ನಿರ್ವಹಣೆಯ ಅಗತ್ಯ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.ಅಲ್ಲದೆ ತೆಂಗಿನ ಕಡ್ಡಿ ಹಾಗೂ ಹುಣಸೆ ಹಣ್ಣಿನ ವ್ಯಾಪಾರ ಮಾಡಿಕೂಂಡು ಜೀವನ ನೆಡೆಸುತ್ತಿದ್ದ ಇವರು ರೈತರಿಂದ ಖರೀದಿಸಿ ತಂದಿದ್ದ ಹುಣಸೆ ಹಣ್ಣು, ತೆಂಗಿನ ಕಡ್ಡಿ ಸೇರಿ ಸುಮಾರು ಲಕ್ಷಾಂತರ ರೂ. ನಷ್ಟವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin