ಉತ್ತಮ ನಾಗರಿಕರನ್ನಾಗಿಸಲು ಪಾಲಕರ – ಶಿಕ್ಷಕರ ಪಾತ್ರ ಮಹತ್ವ

ಈ ಸುದ್ದಿಯನ್ನು ಶೇರ್ ಮಾಡಿ

14

ಅಮೀನಗಡ,ಫೆ.5- ಭವ್ಯ ಭಾರತದ ಪ್ರಜೆಗಳ ಜ್ಞಾನದ ಹಸಿವನ್ನು ಇಂಗಿಸಿ ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಪಾಲಕರ ಹಾಗೂ ಶಿಕ್ಷಕರ ಪಾತ್ರ ಮಹತ್ವವಾಗಿದೆ ಎಂದು ಉಪಪ್ರಾಚಾರ್ಯ ಎ.ಎಚ್. ಬೆಲ್ಲದ ತಿಳಿಸಿದರು. ಸೂಳೇಭಾವಿ ಗ್ರಾಮದ ಸರಕಾರಿ ಪಪೂ ಕಾಲೇಜ್‍ನ ಪ್ರೌಢಶಾಲೆ ವಿಭಾಗದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಗಾಗಿ ನಡೆದ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು. ಮನೆಯೇ ಮೊದಲ ಪಾಠಶಾಲೆ. ಜನನಿ ತಾನೇ ಮೊದಲ ಗುರು ಎಂಬಂತೆ ಮಕ್ಕಳಿಗೆ ಪಾಲಕರು ಅದರಲ್ಲೂ ವಿಶೇಷವಾಗಿ ತಾಯಂದಿರು ಉತ್ತಮ ಸಂಸ್ಕಾರವನ್ನು ಮನೆಯಿಂದಲೇ ಕಲಿಸಲು ಹಾಗೂ ರೂಢಿಸಲು ಪ್ರಾರಂಭಿಸಬೇಕು. ಆಗ ಮಕ್ಕಳ ಉನ್ನತ ಸ್ಥಾನ ತಲುಪಲು ಸಹಕಾರಿಯಾಗುತ್ತದೆ. ಸಾಧನೆಯ ಹಾದಿಯಲ್ಲಿ ನೂರರ ಗುರಿ ಎಂಬ ಇಲಾಖೆ ಘೋಷವಾಕ್ಯ ದಂತೆ ಪ್ರತಿ ಮಗುವೂ ಎಸ್‍ಎಸ್‍ಎಲ್‍ಸಿ ಪಾಸಾಗಬೇಕು ಎಂಬ ಉದ್ದೇಶ ಹೊಂದಿದ್ದು ಆ ನಿಟ್ಟಿನಲ್ಲಿ ಇಲಾಖೆ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಪಾಲಕರ ಸಾಥ್ ನೀಡಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಎಸ್. ಹಿರೇಮಠ ಪರೀಕ್ಷೆ ಆತಂಕ ದೂರ ಮಾಡುವಲ್ಲಿ ಪಾಲಕರ ಪಾತ್ರ ಮಹತ್ವದ್ದು, ಮಕ್ಕಳ ಪರೀಕ್ಷೆ ಫಲಿತಾಂಶ ಸುಧಾರಿಸುವಲ್ಲಿ ಹೆಚ್ಚು ಕಾಳಜಿ ಅಗತ್ಯ. ವಿದ್ಯಾರ್ಥಿಗಳಿಗೆ ಮನೆಯಲ್ಲಿ ಅಧ್ಯಯನಕ್ಕಾಗಿ ಸೂಕ್ತ ವಾತಾವರಣ ಕಲ್ಪಿಸಿಕೊಡಬೇಕು. ಇಂದಿನ ಮಕ್ಕಳ ಮನೋಸ್ಥಿತಿ ಬಹಳ ಸೂಕ್ಷ್ಮವಾಗಿರುವುದರಿಂದ ಒತ್ತಡ ಹಾಕದೆ ಆಸಕ್ತಿಯಿಂದ ಓದುವಂತಾಗಬೇಕು ಎಂದರು. ಡಾ. ಎಸ್.ಸಿ. ರಂಜನಗಿ ಮಾತನಾಡಿ ಶಿಕ್ಷಣ ಇಲಾಖೆಯ ಯೋಜನೆಯಾದ ಬಾಲಕ-ಪಾಲಕ-ಶಿಕ್ಷಕ ಇವೆಲ್ಲದರ ಕರ್ತವ್ಯದ ಬಗ್ಗೆ ತಿಳಿಯ ಪಡಿಸಿದರು. ಈ ಮೂವರೂ ಶಿಕ್ಷಣ ವ್ಯವಸ್ಥೆಯ ಕೊಂಡಿಗಳಿಂತಿದ್ದಂತೆ. ಒಂದು ಕೊಂಡಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಇಡೀ ವ್ಯವಸ್ಥೆಯೇ ಕೆಟ್ಟ ಹಾದಿ ಹಿಡಿಯುತ್ತದೆ. ಪರೀಕ್ಷೆ ಫಲಿತಾಂಶ ಉತ್ತಮ ಪಡಿಸಲು ಮಕ್ಕಳಿಗೆ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆ ಮಾಡುವುದರ ಮೂಲಕ ಅವರ ಮುಂದಿನ ಶೈಕ್ಷಣಿಕ ವ್ಯವಸ್ಥೆಗೆ ಭದ್ರ ಬುನಾದಿ ಹಾಕಬೇಕು ಎಂದರು.
ಶಿಕ್ಷಕಿ ಮಂಜುಳಾ ಕುಷ್ಟಗಿ ಮಿಶನ್ 100 ಅನ್ವಯ ವಿಜ್ಞಾನ ವಿಷಯದಲ್ಲಿನ 9 ಪಾಠಗಳ ಪ್ರಾಮುಖ್ಯತೆ ತಿಳಿಸಿದರು. ಎಸ್.ಸಿ. ಚಲವಾದಿ ಕನ್ನಡ ವಿಷಯ ಕುರಿತು, ಎಸ್.ಎಸ್. ಬಿರಾದಾರ ಗಣಿತ ವಿಷಯ ಕುರಿತು ಎಸ್.ಎಸ್. ಲಮಾಣಿ ಪರೀಕ್ಷೆ ಎದುರಿಸುವ ಕುರಿತು ಪಾಲಕರ ಪರವಾಗಿ ಮಲ್ಲೇಶ ಐಹೊಳೆ ಮಾತನಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin