ಕಾಶ್ಮೀರ ಸಮಸ್ಯೆ ಬಗೆಹರಿಯದೆ ಹೊರತು ಉಭಯ ದೇಶಗಳಲ್ಲಿ ಶಾಂತಿ ಸಾಧ್ಯವಿಲ್ಲ : ಷರೀಫ್

ಈ ಸುದ್ದಿಯನ್ನು ಶೇರ್ ಮಾಡಿ

Nawaz

ಇಸ್ಲಾಮಾಬಾದ್, ಫೆ.5-ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರವು ಮುಖ್ಯ ವಿವಾದದ ವಿಷಯವಾಗಿದೆ ಎಂದು ಪುನರುಚ್ಚರಿಸಿರುವ ಪಾಕ್ ಪ್ರಧಾನಿ ನವಾಜ್ ಷರೀಫ್, ಈ ಬಿಕ್ಕಟ್ಟು ಬಗೆಹರಿಯದೇ ಈ ಪ್ರಾಂತ್ಯದ ಜನರ ಶಾಂತಿ ಮತ್ತು ನೆಮ್ಮದಿಯ ಕನಸು ಸಾಕಾರಗೊಳ್ಳದು ಎಂದು ಹೇಳಿದ್ದಾರೆ.   ಕಾಶ್ಮೀರ ಐಕ್ಯತೆ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ವಿಭಜನೆಯ ಅಪೂರ್ಣ ಕಾರ್ಯಸೂಚಿಯಾಗಿದೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿರುವ ಅತ್ಯಂತ ಹಳೆಯ ವಿವಾದಗಳಲ್ಲಿ ಒಂದಾಗಿದೆ ಎಂದು ವ್ಯಾಖ್ಯಾನಿಸಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅನೇಕ ನಿರ್ಣಯಗಳ ಮೂಲಕ ಅಂತಾರಾಷ್ಟ್ರೀಯ ಸಮುದಾಯದಿಂದ ಕಾಶ್ಮೀರದ ಜನತೆಗೆ ನೀಡಿದ ಸ್ವಯಂ ನಿರ್ಧಾರದ ವಾಗ್ದಾನದ ಹಕ್ಕನ್ನು ನೀಡುವಲ್ಲಿ ಭಾರತವು ಕಳೆದ ಏಳು ದಶಕಗಳಿಂದ ನಿರಾಕರಿಸುತ್ತಿದೆ ಎಂದು ಷರೀಫ್ ಟೀಕಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin