ಚಳ್ಳಕೆರೆ ರಸ್ತೆಯಲ್ಲಿ ಭಾರೀ ಕಂದಕ ಸಾರ್ವಜನಿಕರಿಗೆ ಅಚ್ಚರಿ

ಈ ಸುದ್ದಿಯನ್ನು ಶೇರ್ ಮಾಡಿ

chalkere

ಚಳ್ಳಕೆರೆ, ಫೆ.5- ನಗರದ ಹಳೇ ಬಿಇಒ ಕಚೇರಿ ರಸ್ತೆಯ ಮಧ್ಯಭಾಗದಲ್ಲಿ ಬೃಹತ್ ಗಾತ್ರದ ಕಂದಕ ಬಿದ್ದಿದ್ದು, ಸುರಂಗ ಮಾರ್ಗದಂತೆ ಇರುವ ಈ ಕಂದಕವನ್ನು ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ.ಇಂದು ಬೆಳಗ್ಗೆ ಈ ರಸ್ತೆಯಲ್ಲಿ ಸಂಚರಿಸಿದ ಪಾದಚಾರಿಗಳಿಗೆ ಅಚ್ಚರಿಯಂತೆ ಕಂಡ ಈ ಕಂದಕ ಸುರಂಗ ಮಾರ್ಗದಂತಿದ್ದು,10ಅಡಿ ಉದ್ದ, 6 ಅಡಿ ಆಳವಿದೆ. ವಿದ್ಯುತ್ ಕಂಬದ ಪಕ್ಕದಲ್ಲೇ ಈ ಕಂದಕ ಬಿದ್ದಿದ್ದು, ಕಂಬ ಬೀಳುವ ಆತಂಕದಲ್ಲಿ ಸ್ಥಳೀಯರಿದ್ದಾರೆ.ವಾಹನ ಮತ್ತು ಜನ ಸಂಚಾರ ನಿರ್ಬಂಧಿಸಲಾಗಿದ್ದು, ಪತ್ತೆಯಾದ ಗುಂಡಿಯ ಸುತ್ತ ಕಲ್ಲುಗಳನ್ನು ಇರಿಸಿ ಗುಂಡಿಯತ್ತ ಯಾರೂ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ.ಇನ್ನು ಅಲ್ಲಿ ಜಮಾಯಿಸಿರುವ ಜನ ಕೆಲವರು ಸುರಂಗವೇನೋ ಎಂದರೆ, ಇನ್ನು ಕೆಲವರು ಕಂದಕ ಎಂದು ಮಾತನಾಡುತ್ತಾ ಭಾರೀ ಚರ್ಚೆಗೆ ಗ್ರಾಸವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin