ಜವಾಬ್ದಾರಿ ನಿರ್ವಹಣೆಯಲ್ಲಿ ಪರಮೇಶ್ವರ್ ವಿಫಲ : ಸಿ.ಟಿ.ರವಿ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

C-TRavi

ಬೆಂಗಳೂರು, ಫೆ.4-ಗೃಹ ಇಲಾಖೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿರ್ವಹಿಸುತ್ತಿರುವ ಡಾ.ಜಿ. ಪರಮೇಶ್ವರ್ ಅವರು ಎರಡು ದೋಣಿಯಲ್ಲಿ ಕಾಲಿಟ್ಟು ಯಾವುದೇ ಸ್ಥಾನಕ್ಕೂ ನ್ಯಾಯ ಕೊಡಲು ಆಗದ ಪರಿಸ್ಥಿತಿಯಲ್ಲಿ ಇದ್ದಾರೆ. ಗೃಹ ಇಲಾಖೆಯಂತಹ ಮಹತ್ವದ ಜವಾಬ್ದಾರಿ ವಹಿಸಿಕೊಂಡಿದ್ದರೂ ಅದನ್ನು ನಿರ್ವಹಿಸುವಲ್ಲಿ ವಿಫಲ ರಾಗಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ.  ಪಕ್ಷದ ಅಧ್ಯಕ್ಷರಾಗಿ ಇತ್ತ ಸಂಘಟನೆಯಲ್ಲೂ ಪ್ರಮುಖ ಪಾತ್ರ ವಹಿಸದ ಅವರ ವಿರುದ್ಧವೇ ಕೂಗು ಎದ್ದಿದೆ. ಗೃಹ ಸಚಿವರಾಗಿದ್ದರೂ ಯಾವುದೇ ವಿಷಯಗಳ ಬಗ್ಗೆ ಪ್ರಾಥಮಿಕ ಮಾಹಿತಿ ಇಲ್ಲದೆ, ಮಾಹಿತಿ ಪಡೆದುಕೊಂಡು ಹೇಳು ತ್ತೇನೆ ಎಂದು ಉತ್ತರಿಸುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ನಡೆದಿರುವ ರಾಜಕೀಯ ಮತ್ತು ಸೈದ್ಧಾಂತಿಕ ವಿರೋ 64 ಹತ್ಯೆಗಳಲ್ಲಿ ಶೇ.80ರಷ್ಟು ಆರೋಪಿಗಳನ್ನು ಪತ್ತೆ ಹಚ್ಚಲಾಗಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎಂ.ಎಂ.ಕಲಬುರಗಿ ಸೇರಿ ದಂತೆ ಹಲವರ ಹತ್ಯೆ ನಡೆದಿದ್ದರೂ ಆರೋಪಿಗಳ ಪತ್ತೆಯಾಗಿಲ್ಲದಿ ರುವುದು ವಿಷಾದಕರ ಎಂದರು.  ಅಪೌಷ್ಠಿಕತೆಯಿಂದ 45 ಸಾವಿರ ಮಕ್ಕಳು ರಾಜ್ಯಾದ್ಯಂತ ಸಾವಿಗೀಡಾಗಿದ್ದಾರೆ. ಅಪೌಷ್ಠಿಕತೆ ನಿವಾರಣೆಗಾಗಿ ಒಂದು ಸಾವಿರ ಕೋಟಿ ನೀಡಲಾಗಿದ್ದು, ಅದಷ್ಟೂ ಖರ್ಚಾಗಿದೆ. ಈ ಬಗ್ಗೆ ವಿಧಾನಸಭೆ ಅವೇಶವನದಲ್ಲಿ ಚರ್ಚೆ ನಡೆಸಲಾಗುವುದು. ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಹಾಗೂ ರಾಜ್ಯಪಾಲರ ಭಾಷಣದಲ್ಲಿ ನೀಡಿದ್ದ ಭರವಸೆಗಳಲ್ಲಿ ಈಡೇರಿಕೆಯಾಗಿರುವ ಮತ್ತು ಈಡೇರಿಸದಿರುವ ಭರವಸೆಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಿ ಗಮನ ಸೆಳೆಯಲಾಗುವುದು ಎಂದರು.

ಸರ್ಕಾರ ಶಾದಿಭಾಗ್ಯ-ಮಕ್ಕಳ ಪ್ರವಾಸ ಭಾಗ್ಯದಂತಹ ಯೋಜನೆ ಗಳನ್ನು ಜಾರಿಗೊಳಿಸಿ ಮಕ್ಕಳನ್ನು ಸಮಾಜದಲ್ಲಿ ವಿಂಗಡಿಸುವ ಅವ್ಯಾಹತವಾಗಿ ನಡೆಯುತ್ತಿವೆ. ಇದೀಗ ಮತ್ತೆ ಕೆಲವೇ ಕೆಲವು ಆಯ್ದ ಜಾತಿಯ ಮಕ್ಕಳಿಗೆ ಮೊಟ್ಟೆ ಕೊಡುವಂತೆ ಅಂಗನವಾಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದು ಮಕ್ಕಳ ನಡುವೆ ಜಾತಿಯ ವಿಷ ಬೀಜ ಬಿತ್ತುವ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಮೊಟ್ಟೆ ತಿನ್ನುವ ಮಕ್ಕಳಿಗೆ ಮೊಟ್ಟೆ ನೀಡಲಿ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ನೀಡಲಿ ಎಂದು ಆಗ್ರಹಿಸಿದರು. ವಾರ್ಷಿಕ ಕನಿಷ್ಠ 60 ದಿನ ಅವೇಶನ ನಡೆಸಬೇಕೆಂಬ ನಿಯಮ ವಿದ್ದರೂ ಅದು ಪ್ರಯೋಜನವಾಗುತ್ತಿಲ್ಲ.

ಕಾಗೋಡು ತಿಮ್ಮಪ್ಪ ಅವರು 100 ದಿನಗಳ ಕಾಲ ಅಧಿವೇಶನ ನಡೆಸಲು ಮುಂದಾಗಿದ್ದರು. ಈ ಬಾರಿ ಕೇವಲ ನಾಲ್ಕು ದಿನ ಅಧಿವೇಶನ ನಡೆಸುತ್ತಿರುವುದು ಸರಿಯಲ್ಲ. ಕನಿಷ್ಠ 15 ದಿನ ನಡೆಸಬೇಕು ಎಂದು ಒತ್ತಾಯಿಸಿದರು.   ಬೆಳಗಾವಿ ಅಧಿವೇಶನದ ವೇಳೆ ಸುಸೂತ್ರ ಅಧಿವೇಶನಕ್ಕಾಗಿ ವಿವಾದಾತ್ಮಕ ವಿಷಯಗಳನ್ನು ಕೈಗೆತ್ತಿಕೊಳ್ಳಲಿಲ್ಲ. ಕೇವಲ ವಸ್ತುನಿಷ್ಠ ವಿಷಯಗಳನ್ನು ಚರ್ಚಿಸಲಾಯಿತು. ವಿಧಾನಸಭೆಯೊಂದೇ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇರುವ ಸೂಕ್ತ ವೇದಿಕೆ. ಇದಕ್ಕೆ ಸಹಕಾರ ಕೊಡಲು ಸಿದ್ಧ ಎಂದರು.  ಅಧಿವೇಶನಗಳಲ್ಲಿ ಭಾಗವಹಿಸದ ಜನಪ್ರತಿನಿಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಬೇಕು, ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಎಸ್‍ಎಂಕೆ- ರಾಜಕೀಯ ಧೃವೀಕರಣ:

ಯುಗಾದಿ ನಂತರ ರಾಜ್ಯ ಬಿಜೆಪಿಯಲ್ಲಿ ಕೇಂದ್ರ ರಾಜಕಾರಣದ ಧೃವೀಕರಣ ನಡೆಯಲಿದೆ ಎಂದು ಸಿ.ಟಿ.ರವಿ ಅಭಿಪ್ರಾಯಪಟ್ಟರು.  ಈಗಾಗಲೇ ಕಾಂಗ್ರೆಸ್‍ನಲ್ಲಿ ಸ್ಥಾನ ಪಲ್ಲಟ ನಡೆದಿದೆ. ರಾಜಕೀಯ ಧೃವೀಕರಣದ ಬಗ್ಗೆ ಹಲವಾರು ಮುನ್ಸೂಚನೆಯೂ ದೊರೆತಿದೆ. ಬಿಜೆಪಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಂಡು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಅಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಎಸ್.ಎಂ.ಕೃಷ್ಣ ಅವರು ರಾಷ್ಟ್ರೀಯ ನಾಯಕ ಹಾಗೂ ಹಿರಿಯ ಮುತ್ಸದ್ಧಿ. ರಾಷ್ಟ್ರದ ಹಿತ ಗಮನದಲ್ಲಿಟ್ಟುಕೊಂಡು ಬಿಜೆಪಿಗೆ ಬರುತ್ತಾರೆ. ಅದರೆ ಜೆಡಿಎಸ್‍ಗೆ ಹೋಗುವುದಿಲ್ಲ. ಇದಕ್ಕೆ ಯಾವ ದಿನ, ಎಲ್ಲಿ ಎಂಬ ಮುಹೂರ್ತ ನಿಗದಿಯಾಗಿಲ್ಲ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin