ದಡಾರ-ರುಬೆಲ್ಲಾ ಅಭಿಯಾನ : ನೂರರಷ್ಟು ಗುರಿ ತಲುಪಲು ಪ್ರಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

121

ಹುನಗುಂದ,ಫೆ.5- ಮಾರಣಾಂತಿಕ ದಡಾರ ಮತ್ತು ರುಬೆಲ್ಲಾ ಕಾಯಿಲೆಗಳ ನಿರ್ಮೂಲನೆಗೆ ತಾಲೂಕಿನಾದ್ಯಂತ ಇದೇ 7ರಿಂದ 28ರವರೆಗೆ ದಡಾರ ಮತ್ತು ರುಬೆಲ್ಲಾ ಅಭಿಯಾನ ನಡೆಯಲಿದೆ ಎಂದು ತಹಶೀಲ್ದಾರ್ ಸುಬಾಸ ಸಂಪಗಾವಿ ಹೇಳಿದರು. ಸಾರ್ವಜನಿಕ ಆಸ್ಪತ್ರೆ ನಡೆಸಿದ ಜನಜಾಗೃತಿ ಜಾಥಾದಲ್ಲಿ ಅವರು ಪಾಲ್ಗೊಂಡು ಮಾತನಾಡಿ, ಇಲಾಖೆಗಳ ಸಹಕಾರದಿಂದ ತಾಲೂಕಿನಲ್ಲಿ ನೂರಷ್ಟು ಗುರಿ ತಲುಪಲು ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ತಾಲೂಕು ಮಟ್ಟದ ಎಲ್ಲಾ ಹಿರಿಯ ಅಧಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳು ಸದಸ್ಯರಾಗಿ ಕಾರ್ಯ ನಿರ್ವಹಿಸುವರೆಂದರು. ಅಭಿಯಾನ ಕುರಿತು ಪೋಷಕರಿಗೆ ಮಾಹಿತಿ ನೀಡುವುದು ಜೊತೆಗೆ ಅವರ ಸಭೆ ನಡೆಸಿ ಮಕ್ಕಳು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಗಮನ ಹರಿಸುವುದೆ ಈ ಜಾಥಾದ ಉದ್ದೇಶ ಎಂದರು.

ತಾಲೂಕು ವೈಧ್ಯಾಧಿಕಾರಿ ಡಾ. ಕುಸುಮಾ ಮಾಗಿ ಮಾತನಾಡಿ ಎಂಆರ್ ಲಸಿಕಾ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಲಸಿಕೆ ಕೊಡಿಸುವ ಮೂಲಕ ದಡಾರ ನಿರ್ಮೂಲನೆ ಮತ್ತು ರುಬೆಲ್ಲಾ ನಿಯಂತ್ರಣಕ್ಕೆ ಪಾಲಕರು ಮತ್ತು ಸಾರ್ವ ಜನಿಕರು ಸಹಕರಿಸಬೇಕು ಎಂದು ಅವರು ತಿಳಿಸಿದರು. 9ತಿಂಗಳಿಂದ 15ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆಗಳನ್ನು ಹಾಕಲಾಗುವುದು. ಸಿಡಿಪಿಒ ಸಿ.ಎಸ್. ರಾಂಪೂರ, ಪ್ರಾಆಕೇಂ ವೈಧ್ಯಾಧಿಕರಿಗಳು ಮತ್ತು ಅಂಗನವಾಡಿ ಮೇಲ್ವಿಚಾರಕಿಯರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin