ಶೇ.7ಕ್ಕಿಂತ ಹೆಚ್ಚು ಆರ್ಥಿಕ ಪ್ರಗತಿ ಸಾಧಿಸುವ ವಿಶ್ವಾಸ

ಈ ಸುದ್ದಿಯನ್ನು ಶೇರ್ ಮಾಡಿ

Shaktikant-Das

ನವದೆಹಲಿ, ಫೆ.4-ಮುಂದಿನ ಹಣಕಾಸು ವರ್ಷದಲ್ಲಿ ಶೇ.7ಕ್ಕಿಂತಲೂ ಹೆಚ್ಚು ಆರ್ಥಿಕ ಬೆಳವಣಿಗೆ ಸಾಧಿಸುವ ವಿಶ್ವಾಸವನ್ನು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೆಹಲಿ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷದ ಜಿಡಿಪಿ ಬೆಳವಣಿಗೆಗಾಗಿ ನಾವು ಮಾರ್ಚ್ ಅಂತ್ಯದವರೆಗೆ ಕಾಯಬೇಕು. ಆದರೆ ಮುಂದಿನ ವರ್ಷ ಅದು ಶೇ.7ಕ್ಕಿಂತ ಅಧಿಕ ಪ್ರಮಾಣದ ಏರುಗತಿಯಲ್ಲಿ ಇರಲಿದೆ. ಆರ್ಥಿಕ ಕ್ಷೇತ್ರದಲ್ಲಿ ಜಾಗತಿಕ ಹಿನ್ನೆಡೆಯಾಗಿದ್ದರೂ, ಭಾರತದ ಬೆಳವಣಿಗೆ ಹೆಚ್ಚು ಸದೃಢವಾಗಿ ಉಳಿದಿದೆ ಎಂದರು.
ನೋಟು ರದ್ದತಿಯಿಂದ ಆರ್ಥಿಕತೆ ಮೇಲೆ ಪರಿಣಾಮ ಉಂಟಾಗಿದ್ದರೂ, ಮುಂದಿನ ಹಣಕಾಸು ವರ್ಷದಲ್ಲಿ ಅದು ಮುಂದುವರಿಯುವುದಿಲ್ಲ. ಆರ್ಥಿಕ ಕ್ಷೇತ್ರದ ಬಹು ದೊಡ್ಡ ಭಾಗವು ಡಿಜಿಟಲ್ ವ್ಯವಹಾರಗಳತ್ತ ಸಾಗುತ್ತಿದೆ ಎಂದು ದಾಸ್ ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin