ಹುಡುಗೀರಿಗೆ ಲಿಫ್ಟ್ ಕೊಡೋ ವಾಹನ ಸವಾರರೇ ಇದನ್ನೊಮ್ಮೆ ಓದಿಬಿಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Lift-Please

ಬಾಗೇಪಲ್ಲಿ, ಫೆ.5 – ವಾಹನ ಸವಾರರೇ, ಹುಷಾರ್.. ! ಯಾವುದೋ ಬ್ಯೂಟಿಫುಲ್ ಹುಡುಗಿ ಟಿಪ್‍ಟಾಪ್ ಡ್ರೆಸ್ ಮಾಡಿಕೊಂಡು ಲಿಫ್ಟ್ ಕೇಳಿದ್ರೆ ಕೊಟ್ಟಿರೀ ಜೋಕೆ.ಯಮಾರಿ ವಾಹನ ನಿಲ್ಲಿಸಿದರೆ ನಿಮ್ಮ ಜೇಬ್ಗೆ ಕತ್ತರಿ ಗ್ಯಾರಂಟಿ. ಹೀಗೆ ಹಲವಾರು ಚಾಲಕರು ತಮ್ಮ ಹಣ ಹಾಗೂ ಮೊಬೈಲ್‍ಗಳನ್ನು ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಸಂಗ ರಾಷ್ಟ್ರೀಯ ಹೆದ್ದಾರಿ7ರಲ್ಲಿ ಸಾಮಾನ್ಯವಾಗಿಬಿಟ್ಟಿದೆ.  ಬಾಗೇಪಲ್ಲಿ ಸೇರಿದಂತೆ ಆಂಧ್ರಪ್ರದೇಶದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ರಸ್ತೆ ಬದಿ ಟಿಪ್‍ಟಾಪ್ ಆಗಿ ಡ್ರೆಸ್ ಮಾಡಿಕೊಂಡು ಹುಡುಗಿಯರು ಚಾಲಕರನ್ನು ತಮ್ಮತ್ತ ಆಕರ್ಷಿಸಿ ವಾಹನ ಇಳಿಯುತ್ತಿದ್ದಂತೆ ರಸ್ತೆ ಬದಿ ಕರೆದುಕೊಂಡು ಹೋಗುತ್ತಿದ್ದಂತೆ ಯುವತಿಯ ಗುಂಪಿನಲ್ಲಿರುವ ಪುರುಷರು ಬಂದು ಚಾಲಕರ ಮೇಲೆ ಹಲ್ಲೆ ಮಾಡಿ ಹಣ, ಆಭರಣ, ಮೊಬೈಲ್ ದೋಚುತ್ತಿದ್ದರು.

ಈ ಕೃತ್ಯ ಎಗ್ಗಿಲ್ಲದೆ ನಡೆಯುತ್ತಿದ್ದು, ಲಾರಿ ಚಾಲಕರು ಪೆನಗೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಪ್ರವೃತ್ತದ ಪೊಲೀಸರು ಬಾಗೇಪಲ್ಲಿ ತಾಲೂಕಿನ ಸುಂಕಲಮ್ಮ ದೇವಸ್ಥಾನದ ಬಳಿ ರೋಜಾ ಎಂಬಾಕೆಯನ್ನು ಬಂಧಿಸಿದ ಆಂಧ್ರಪ್ರದೇಶದ ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿ ಅವರ ಗುಂಪಿನಲ್ಲಿದ್ದ ಗೋಳೂರು ಗ್ರಾಮದ 4 ಮಂದಿ ಹಾಗೂ ಮಾರ್ಗಾನುಕುಂಟೆ ಗ್ರಾಮದ ಇಬ್ಬರನ್ನು ಬಂಧಿಸಿದ್ದಾರೆ.  ರೋಜಾ ಸೇರಿದಂತೆ 7 ಜನರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin