10 ರೂ. ನಾಣ್ಯ ಚಲಾವಣೆ : ಎಸ್‍ಬಿಐ ಮತ್ತು ಯಾವುದೇ ಬ್ಯಾಂಕ್‍ಗಳಲ್ಲಿ ಜಮೆ ಮಾಡಬಹುದೆಂದು ಅಧಿಕಾರಿಗಳು ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

COINS

ಹುಬ್ಬಳ್ಳಿ,ಫೆ.5-ನಗರದಲ್ಲಿ 10 ರೂ. ನಾಣ್ಯ ಚಲಾವಣೆಯಲ್ಲಿ ಇಲ್ಲ ಎಂಬ ವದಂತಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಲಯದ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. 10 ರೂ. ಮುಖಬೆಲೆಯ ನಾಣ್ಯವನ್ನು ಎಸ್‍ಬಿಐ ಮತ್ತು ಯಾವುದೇ ಬ್ಯಾಂಕ್‍ಗಳಲ್ಲಿ ಜಮೆ ಮಾಡಬಹುದೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಳೆದ ನ.8ರಂದು 500 ಹಾಗೂ ಸಾವಿರ ಮುಖಬೆಲೆಯ ನೋಟ್ ಬ್ಯಾನ್ ಆದ ನಂತರ ಕ್ರಮೇಣ ಮತ್ತಿನೇನು ಕಾದಿದೆಯೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಕೆಲವರು 10 ರೂ. ನಾಣ್ಯ ಚಲಾವಣೆಗೆ ಇಲ್ಲವಂತೆ ಎಂಬ ಗಾಳಿ ಸುದ್ದಿ ಹಬ್ಬಿಸಿದ್ದರು. ಇದರಿಂದಾಗಿ ಕೆಲವೊಂದು ಅಂಗಡಿಗಳಲ್ಲಿ, ಪೆಟ್ರೋಲ್ ಬಂಕ್‍ಗಳಲ್ಲಿ 10 ರೂ. ನಾಣ್ಯವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಕೆಲವರು 10 ರೂ. ನಾಣ್ಯವನ್ನು ನಾವು ತೆಗೆದುಕೊಳ್ಳುತ್ತೇವೆ. 100 ರೂ.ಗೆ 90 ರೂ. ಕೊಡುತ್ತೇವೆ ಎಂದು ಕಮೀಷನ್ ಆಸೆ ತೋರಿಸಿ ದುಡ್ಡು ಮಾಡಿಕೊಳ್ಳುತ್ತಿದ್ದರು.

ಈ ಬಗ್ಗೆ ಹಲವಾರು ಬಾರಿ ಬ್ಯಾಂಕ್ ಅಧಿಕಾರಿಗಳು ಕೂಡ ಸ್ಪಷ್ಟನೆ ನೀಡಿದ್ದರೂ ಕೆಲ ಗ್ರಾಮೀಣ ಪ್ರದೇಶದ ಜನರು ಹುಬ್ಬಳ್ಳಿಯಲ್ಲಿ 10 ರೂ. ನಾಣ್ಯ ನಡೆಯುವುದಿಲ್ಲವಂತೆ ಎಂಬ ವದಂತಿಯನ್ನು ಹಬ್ಬಿಸಿದ್ದರು. ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲೂ ಕೂಡ 10 ರೂ. ಮುಖಬೆಲೆಯ ನಾಣ್ಯ ಚಲಾವಣೆಯಲ್ಲಿ ಇಲ್ಲ ಎಂಬ ಸುದ್ದಿ ಹಬ್ಬಿಕೊಂಡಿತ್ತು.  ಇದರಿಂದಾಗಿ ಕೆಲವರು ತಮ್ಮಲ್ಲಿದ್ದ 10 ರೂ. ನಾಣ್ಯಗಳನ್ನು ಕಡಿಮೆ ಹಣಕ್ಕೆ ಬದಲಾವಣೆ ಮಾಡಿಕೊಂಡಿದ್ದರು. ಈ ಸಂದರ್ಭವನ್ನು ಉಪಯೋಗಿಸಿಕೊಂಡ ಕೆಲ ಚಾಲಾಕಿ ವ್ಯಾಪಾರಿಗಳು ಮುಗ್ಧ ಹಳ್ಳಿಜನರನ್ನು 10 ರೂ. ನಾಣ್ಯ ನಡೆಯುವುದಿಲ್ಲ. ಇಟ್ಕೊಂಡು ಏನ್ ಮಾಡ್ತೀರಾ, ನಮಗೆ ಕೊಟ್ಟುಬಿಡಿ. ಅದರಲ್ಲಿರುವ ತಾಮ್ರವನ್ನು ತೆಗೆಸುತ್ತೇವೆ ಎಂದು ಪಡೆದುಕೊಳ್ಳುತ್ತಿದ್ದರು.  ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, 10 ರೂ. ನಾಣ್ಯಗಳನ್ ಎಸ್‍ಬಿಐ ಅಥವಾ ಯಾವುದೇ ಬ್ಯಾಂಕ್‍ನಲ್ಲಿ ಜಮೆ ಮಾಡಬಹುದಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin