ಅಮಾನತು ವಿಚಾರಣೆ ವಿಳಂಬ : ಮರವೇರಿ ಪ್ರತಿಭಟಿಸಿದ ಸಾರಿಗೆ ನೌಕರ

ಈ ಸುದ್ದಿಯನ್ನು ಶೇರ್ ಮಾಡಿ

8

ಮುದ್ದೇಬಿಹಾಳ,ಫೆ.6– ತಮ್ಮ ಮೇಲೆ ಇರುವಅಮಾನತು ಪ್ರಕರಣದ ವಿಚಾರಣೆಯನ್ನು ವಿಳಂಬ ಮಾಡಲಾಗುತ್ತಿದ್ದು, ಇದರಿಂದ ಬೇಸತ್ತ ನೌಕರರೊಬ್ಬರು ಸಾರಿಗೆಘಟಕದಆವರಣದಲ್ಲಿದ್ದ ಮರವನ್ನೇರಿಕೂತ ಘಟನೆ ನಿನ್ನೆ ಸಂಜೆ ಸಾರಿಗೆ ಘಟಕದಲ್ಲಿ ನಡೆದಿದೆ.ಸಾರಿಗೆಘಟಕದಲ್ಲಿ ಚಾಲಕ ಹಾಗೂ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದರಾಜು ಮಡಿವಾಳಪ್ಪ ಚಲವಾದಿ ಕಳೆದ ಐದು ತಿಂಗಳ ಹಿಂದೆ ಟಿಸಿ ಕೈಯ್ಯಲ್ಲಿ ಸಿಕ್ಕು ಅಮಾನತುಗೊಂಡಿದ್ದು, ಪ್ರಕರಣವನ್ನು ಅಧಿಕಾರಿಗಳು ಮುಕ್ತಾಯಗೊಳಿಸುತ್ತಿಲ್ಲ.

ಅಲ್ಲದೆ ಕಳೆದ ಐದು ತಿಂಗಳಿನಿಂದ ಬೇರೆಡೆ ಸೇವೆಗೆ ಹಾಜರಾಗಲು ಅವಕಾಶ ನೀಡಿಲ್ಲ.ಇದರಿಂದತನ್ನ ಕುಟುಂಬ,ಮಕ್ಕಳನ್ನು ಸಲಹುವುದು ಕಷ್ಟದಾಯಕವಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮರಏರಿಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹೇಳಿಕೊಂಡರು.  ಅವರನ್ನುಘಟಕದ ಸಿಬ್ಬಂದಿ ಗಮನಿಸಿ ಮರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು.ಘಟನ ಸ್ಥಳಕ್ಕೆ ಪೊಲೀಸರು ಭೇಟಿ  ನೀಡಿ ತಿಳುವಳಿಕೆ ಹೇಳಿದರು.ಈ ಸಂದರ್ಭದಲ್ಲಿದೂರವಾಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆಘಟಕದವಿಭಾಗೀಯ ನಿಯಂತ್ರಣಾಧಿಕಾರಿಗಂಗಾಧರ, ಈ ಪ್ರಕರಣದವಿಚಾರಣೆ ನಡೆಸಿ ಪರಿಶೀಲಿಸಿ ಕ್ರಮಜರುಗಿಸುವಂತೆ ಸಂಬಂಧಿಸಿದ ತನಿಖಾಧಿಕಾರಿಗೆ ತಿಳಿಸಲಾಗಿದೆ.ಇನ್ನೊಂದು ವಾರದಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin