ಆಫ್ಘಾನಿಸ್ತಾನದ ವಿವಿಧೆಡೆ ಭಾರೀ ಹಿಮಪಾತ : 100ಕ್ಕೂ ಹೆಚ್ಚು ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Afganistan-01

ಕಾಬೂಲ್, ಫೆ.6-ಆಫ್ಘಾನಿಸ್ತಾನದ ವಿವಿಧೆಡೆ ಸಂಭಸಿದ ಭಾರೀ ಹಿಮಪಾತದಿಂದಾಗಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಈ ನೈಸರ್ಗಿಕ ವಿಕೋಪದಲ್ಲಿ ಅನೇಕರು ಕಣ್ಮರೆಯಾಗಿದ್ದಾರೆ. ಕಳೆದ ಮೂರು ದಿನಗಳಿಂದಲೂ ಅಫ್ಘಾನಿಸ್ತಾನದ ಬಹುಭಾಗಗಳಲ್ಲಿ ಭಾರೀ ಬಿರುಗಾಳಿಯೊಂದಿಗೆ ಹಿಮದ ವರ್ಷಧಾರೆಯಾಗುತ್ತಿದೆ. ಮಧ್ಯ ಮತ್ತು ಈಶಾನ್ಯ ಪ್ರಾಂತ್ಯಗಳಲ್ಲಿ ಹಿಮಕುಸಿತ ಉಂಟಾಗಿದೆ. ನುರಿಸ್ತಾನ್ ಪ್ರಾಂತ್ಯವೊಂದರಲ್ಲೇ ಹಿಮಪಾತದಿಂದ 50ಕ್ಕೂ ಹೆಚ್ಚು ಜನರು ಅಸುನೀಗಿದ್ದು, ಅನೇಕರಿಗೆ ಗಾಯಗಳಾಗಿವೆ. ಈವರೆಗೆ 50 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ದುರಂತದಲ್ಲಿ ಕೆಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ.

ಹಿಮಪಾತದ ರೌದ್ರಾವತಾರಕ್ಕೆ ಬರ್ಗ್‍ಮತ್ತಲ್ ಪ್ರಾಂತ್ಯದ ಎರಡು ಹಳ್ಳಿಗಳು ಹೇಳಹೆಸರಿಲ್ಲದಂತೆ ನಿರ್ನಾಮವಾಗಿದೆ. ಇನ್ನೂ ಕೆಲವು ಗ್ರಾಮಗಳು ಹಿಮದಲ್ಲಿ ಹೂತುಹೋಗಿವೆ. ಬಹುತೇಕ ರಸ್ತೆಗಳು ಮತ್ತು ಹೆದ್ದಾರಿಗಳು ಹಿಮಾವೃತವಾಗಿರುವುದರಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿದೆ.   ಹಿಮಪಾತದಿಂದ ಈ ತನಕ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿದೆ. ಕೆಲವರು ನಾಪತ್ತೆಯಾಗಿದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುವ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin