ಎತ್ತಿನಹೊಳೆ ಯೋಜನೆ ವಿಚಾರಣೆ : ದಕ್ಷಿಣ ವಿಭಾಗದ ಎನ್‍ಜಿಟಿ ಪೀಠಕ್ಕೆ ವಾಪಸ್ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

NGT-05

ನವದೆಹಲಿ, ಫೆ.6 : ಎತ್ತಿನ ಹೊಳೆ ಯೋಜನೆ ಕುರಿತು ವಿಚಾರಣೆಯನ್ನು ದಕ್ಷಿಣ ವಿಭಾಗದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ (ಎನ್‍ಜಿಟಿ) ಮುಂದುವರಿಸುವ ಕುರಿತು ನಾಳೆ ಆದೇಶ ಹೊರಡಿಸುವುದಾಗಿ ದೆಹಲಿಯ ಎನ್‍ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರ್ಯ ಕುಮಾರ್ ಹೇಳಿದ್ದಾರೆ. ಯೋಜನೆಯ ಅರ್ಜಿ ಕುರಿತು ವಿಚಾರಣೆ ನಡೆಸಿದ ಅವರು, ಈ ವಿಷಯದಲ್ಲಿ ಗೊಂದಲಕಾರಿ ವರದಿ ನೀಡಿರುವ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು.  ಯೋಜನೆಗೆ ಪರಿಸರ ಪರಿಣಾಮದ ವರದಿಯ ಅಗತ್ಯವಿಲ್ಲ. ಕೆಲವು ಷರತ್ತುಗಳೊಂದಿಗೆ ಅನುಮತಿ ಲಭಿಸಿದೆ. ಹೀಗಾಗಿ ಈ  ಯೋಜನೆಗೆ ವರದಿಯ ಅಗತ್ಯವಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮದ ಪರವಾಗಿ ವಕೀಲರು ವಾದ ಮಂಡಿಸಿದರು.

ಈ ಹೇಳಿಕೆಯಿಂದ ಕೆರಳಿದ ನ್ಯಾಯಮೂರ್ತಿ ಸ್ವತಂತ್ರಕುಮಾರ್ ಖಾರವಾಗಿ ಪ್ರತಿಕ್ರಿಯಿಸಿ, ಹಾಗಿದ್ದರೆ ಅರ್ಜಿದಾರರು ಸುಪ್ರೀಂಕೋರ್ಟ್‍ಗೆ ಹೋಗಲಿ. ಅಲ್ಲಿ ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಲಿ. ನಾನು ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದರು.   ಈ ಕೂಡಲೇ ಎತ್ತಿನಹೊಳೆ ಯೋಜನೆ ಕುರಿತು ವಿಚಾರಣೆಯನ್ನು ದಕ್ಷಿಣ ವಿಭಾಗದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ವಿಚಾರಣೆ ಮುಂದುವರಿಸಲಾಗುವುದು. ಈ ಬಗ್ಗೆ ನಾಳೆ ಆದೇಶ ನೀಡಲಾಗುವುದು ಎಂದು ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin