ಡಿಜೆ ಕಟ್ಟಾಜ್ಞೆ : ಸಂಚಾರ ಸುಧಾರಣೆಗೆ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಫೆ.6- ನಗರದಲ್ಲಿ ಸಂಚಾರ ವ್ಯವಸ್ಥೆಯ ಸುಧಾರಣೆಗೆ ಜಿಲ್ಲಾ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ವಾರದ ಗಡುವು ನೀಡುತ್ತಿದ್ದಂತೆ ಇಡೀ ನಗರ ಪೊಲೀಸ್ ವ್ಯವಸ್ಥೆ ಇಂದು ತೀವ್ರ ಕಾರ್ಯಾಚರಣೆಗಿಳಿಯಿತು.ಡಿಸಿಪಿಗಳಾದ ಜಿ. ರಾಧಿಕಾ ಹಾಗೂ ಅಪರಾಧ ವಿಭಾಗದ ಡಿಸಿಪಿ ಅಮರನಾಥರೆಡ್ಡಿ ನೇತೃತ್ವದಲ್ಲಿ ನಗರದ ರಸ್ತೆ ತುಂಬ ಪರಿಶೀಲನೆ ನಡೆಯಿತು.ಹೆಲ್ಮೇಟ್ ಧರಿಸದೇ, ಆಟೊಮೀಟರ್ ಅಳವಡಿಸದೇ, ಅಡ್ಡಾದಿಡ್ಡಿ ಬೈಕ್ ಚಲಾಯಿಸುವ ಪಡ್ಡೆಗಳಿಗೆ ಬಿಸಿ ಮುಟ್ಟಿಸಿದರು. ಜಿಲ್ಲಾಧಿಕಾರಿ ಹಲವು ಬಾರಿ ಪೊಲೀಸರಿಗೆ ಆದೇಶ ಕೊಟ್ಟರೂ ಕ್ಯಾರೆ ಎನ್ನದಿದ್ದ ಪೊಲೀಸ್ ಆಡಳಿತ ಜಿಲ್ಲಾ ನ್ಯಾಯಾಧೀಶ ಆರ್.ಜೆ. ಸತೀಶಸಿಂಗ್ ಅವರ ಕಟ್ಟುನಿಟ್ಟಿನ ಸೂಚನೆ ಮಾರನೆ ದಿನ ಇಂದು ಕಾರ್ಯಚರಣೆಗೆ ಇಳಿದರು.ನಾನು ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ಸುಗಮದ ವಾಗ್ದಾನ ನೀಡಿದ್ದೇನೆ. ಕನಿಷ್ಠ 12 ಸಾವಿರ ಮೇಲ್ಪಟ್ಟು ಸಂಚಾರ ಉಲ್ಲಂಘನೆ, ಆರ್‍ಟಿಓ ವ್ಯಾಪ್ತಿಯ ಉಲ್ಲಂಘನೆ ಕೇಸ್‍ಗಳನ್ನು ದಾಖಲಿಸಿ ವರದಿ ನೀಡುವಂತೆ ಕಮಿಷನರ್ ಟಿ.ಜೆ. ಕೃಷ್ಣಭಟ್, ಡಿಸಿಪಿ ಜಿ. ರಾಧಿಕಾ ಹಾಗೂ ಎಸ್‍ಪಿ ಡಾ. ರವಿಕಾಂತೇಗೌಡ ಅವರಿಗೆ ನಿನ್ನೆ ಬೆಳಿಗ್ಗೆ ಸೂಚಿಸಿದ್ದರು.ತ್ರಿಬಲ್ ರೈಡಿಂಗ, ಪಾಲಿಸದ ಲೇನ್ ಡಿಸಿಪ್ಲೇನ್ , ಹೆಲ್ಮೆಟ್ ಇಲ್ಲದೇ ಪ್ರಯಾಣ, ವಾಹನ ದಾಖಲಾತಿಗಳಿಲ್ಲದಿರುವುದು, ಆಟೋಮೀಟರ್ ಅಳವಡಿಸದಿರುವುದು, ಭಾರಿ ವಾಹನಗಳ ನಗರ ಪ್ರವೇಶ ಸೇರಿದಂತೆ ಹತ್ತು ಹಲವು ನಗರದ ಸಂಚಾರ ಸಮಸ್ಯೆಗಳನ್ನು ಡಿಜೆ ಒತ್ತಿ ಹೇಳಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin