ಬೆಂಗಳೂರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

3-Arrested-01

ಬೆಂಗಳೂರು,ಫೆ.6-ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿ 35 ಸಾವಿರ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಸೈಯದ್ ಅಮಾನುಲ್ಲಾ (54) ಹಿದಾಯತ್ ಪಾಷಾ(33) ಮತ್ತು ಶಂಭಯ್ಯ(55) ಬಂಧಿತ ಆರೋಪಿಗಳು. ಬಂಧಿತರಿಂದ 35 ಸಾವಿರ ಬೆಲೆ ಬಾಳುವ 1900 ಗ್ರಾಂ ತೂಕದ ಮಾದಕವಸ್ತು ಗಾಂಜಾ, ಮೂರು ಮೊಬೈಲ್, ಕಾಲೇಜು ಬ್ಯಾಗ್, ದ್ವಿಚಕ್ರ ವಾಹನಗಳು ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.   ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ, ಐಟಿಬಿಟಿ ಕಂಪನಿ ನೌಕರರಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ದಕ್ಷಿಣ ವಿಭಾಗದ ಉಪಪೊಲೀಸ್ ಕಮೀಷನರ್ ಡಾ.ಶರಣಪ್ಪ ಅವರು ಕ್ರಮ ಜರುಗಿಸಲು ಸಲಹೆ ಸೂಚನೆ ನೀಡಿದ್ದರು.

ಅದರಂತೆ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕಾಂತರಾಜ್ ನೇತೃತ್ವದಲ್ಲಿ ಬಸವನಗುಡಿ ಠಾಣೆ ಇನ್‍ಸ್ಪೆಕ್ಟರ್ ಶಶಿಧರ್, ಪಿಎಸ್‍ಐಗಳಾದ ನಂಜೇಗೌಡ, ಕವಿತಾ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಸರ್ಕಾರಿ ಶಾಲೆ ಪಕ್ಕದ ನಿರ್ಮಾಣ ಹಂತದ ಕಟ್ಟಡದ ಬಳಿ ಹೆಚ್ಚಿನ ಹಣ ಸಂಪಾದನೆಗಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಆರೋಪಿಗಳನ್ನು ಬಲೆಗೆ ಬೀಳಿಸಿಕೊಂಡಿದೆ.   ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin