ಯಾರು ಗ್ರಂಥ ಓದುವುದಿಲ್ಲೋ, ಅಭ್ಯಾಸ ಮಾಡೋದಿಲ್ಲೋ, ಅವರೇ ನಿಜವಾದ ಮೂರ್ಖರು

ಈ ಸುದ್ದಿಯನ್ನು ಶೇರ್ ಮಾಡಿ

14

ಕುಳಗೇರಿ ಕ್ರಾಸ್,ಫೆ.6- ಯಾರು ಗ್ರಂಥ ಓದುವುದಿಲ್ಲೋ, ಅಭ್ಯಾಸ ಮಾಡೋದಿಲ್ಲೋ, ಅವರೇ ನಿಜವಾದ ಮೂರ್ಖರು, ಜ್ಞಾನ ಮನುಷ್ಯನಿಗೆ ಬಹಳ ಮುಖ್ಯ ಅದನ್ನ ಪಡೆಯಬೇಕಾದರೆ ಮಹಾತ್ಮರ ದರ್ಶನದಿಂದ ಮಾತ್ರ ಸಾಧ್ಯ ಎಂದು ಅಂತಾಪೂರ ಸುಜ್ಞಾನ ದೇವರು ಹೇಳಿದರು. ಸುಕ್ಷೇತ್ರ ಚಿರ್ಲಕೊಪ್ಪ ಗ್ರಾಮದ ಶ್ರೀ ಸದ್ಗುರು ಪೂರ್ಣಾನಂದ ಆಸ್ರಮದಲ್ಲಿ 5ನೇ ಸತ್ಸಂಗ ಸಮ್ಮೇಳನದಲ್ಲಿ ವಿಶ್ವಶಾಂತಿಗಾಗಿ ನಡೆದ ಕೋಟಿ ಜಪಯಜ್ಞ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಆಶಿರ್ವಚನ ನೀಡಿ ಮಾತನಾಡಿದ ಅವರು, ಅಸ್ಥಿರ ಜೀವನದ ಮದ್ಯ ಸಂತೋಷದಿಂದಿರಬೇಕು, ಇಡಿ ದಿನ ಸಂತೋಷದಿಂದಿರಬೇಕಾದರೆ ನಗು-ನಗುತ್ತಾ ಏಳಬೇಕು, ಮನೆ-ಮನ ಎರಡು ಪರಿವರ್ತನೆ ಯಾಗುತ್ತದೆ. ಶಿವನ ದ್ಯಾನ ಮಾಡಿದರೆ ಮಾತ್ರ ಸುಖವಾಗಿರಲು ಸಾಧ್ಯ ಎಂದರು.

ಶಾಂತಮ್ಮತಾಯಿ, ರಾಜೇಶ್ವರಿತಾಯಿ, ಗೀತಮ್ಮತಾಯಿ, ಜಾನಮ್ಮತಾಯಿ ಮಾತನಾಡಿ, ಮನುಷ್ಯ ಜನ್ಮಕ್ಕೆ ಮುಪ್ಪಾವಸ್ತೆ ಬಂದಾಗ ಸಂಸಾರದ ರುಚಿ ಗೊತ್ತಾಗುತ್ತೆ, ನಿಮ್ಮ ದೇಹದಲ್ಲಿ ತಾಕತ್ತು ಇದ್ದಾಗ ನೀವು ಪ್ರಪಂಚಕ್ಕೆ ಹೇಗೆ ಮಹತ್ವ ಕೊಡುತ್ತಿರೋ, ಹಾಗೆ ಸ್ವಲ್ಪ ಸಮಯ ಆದ್ಯಾತ್ಮಕ್ಕೂ ಕೊಡಿ ಇಲ್ಲದಿದ್ದರೆ ನಿಮ್ಮ ಮಾನವ ಜೀವನ ವ್ಯರ್ಥ, ದುಶ್ಚಟಗಳಿಂದ ಈ ಸುಂದರ ಶರಿರವನ್ನ ಹಾಳು ಮಾಡಿಕೊಳ್ಳುತ್ತಿರುವ ನಿಮ್ಮ ಅಲ್ಪ ಬುದ್ದಿ ನಿಮ್ಮನ್ನಷ್ಟೇ ಅಲ್ಲ, ನಿಮ್ಮನ್ನೇ ನಂಬಿದ ಹೆಂಡಿರ ಮಕ್ಕಳ ಜೀವವನ್ನು ಹಾಳು ಮಾಡುತ್ತಿದ್ದಿರಿ, ನಿಮ್ಮ ಜೀವನದ ಅಂತ್ಯದಲ್ಲಿ ಆಗುವ ತೊಂದರೆಗಳನ್ನ ತಿದ್ದಿಕೊಳ್ಳಿ ಎಂದರು.

ಸೋಮನಕೊಪ್ಪ ಶ್ರದ್ಧಾನಂದ ಸ್ವಾಮೀಜಿ ಮತನಾಡಿ, ಮಹಿಳೆಯರು ಸ್ವಾವಲಂಬಿ ಜೀವನವನ್ನು ರೂಪಿಸಿಕೊಳ್ಳಲು ಮುಂದಾಗಬೇಕು, ಎಲ್ಲ ಕ್ಷೇತ್ರದಲ್ಲು ಮಹಿಳೆಯರಿಗೆ ಸಾಧನೆ ಮಾಡಲು ಸಂಪೂರ್ಣ ಹಕ್ಕಿದೆ, ಅನ್ಯಾಯ ಅಧರ್ಮದಿಂದ ತುಂಬಿ-ತುಳುಕುತ್ತಿರುವ ಈ ಜಗತ್ತಿನಲ್ಲಿ ಮಠ-ಮಾನ್ಯಗಳು ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಮಹತ್ವಕೊಟ್ಟು ಧರ್ಮದ ಉಳಿವಿಗಾಗಿ ಹೆಚ್ಚು ಗಮನಹರಿಸಬೇಕಿದೆ. ಎಲ್ಲ ಗ್ರಾಮಗಳಲ್ಲೂ ಕೋಟಿ ಜಪಯಜ್ಞ ಕಾರ್ಯಕ್ರಮಗಳನ್ನ ಭಕ್ತರು ಯಶಶ್ವಿಯಾಗಿ ನಡೆಸುತ್ತಿರುವುದು ನಮಗೆ ಸಂತಸ ತಂದಿದೆ ಎಂದರು.
ಬೈರನಹಟ್ಟಿ ಶಾಂತಲಿಂಗ ಶ್ರೀಗಳು ಮಾತನಾಡಿ, ಇಂದಿನ ದಿನಮಾನದಲ್ಲಿ ಶಾಂತಿ-ನೆಮ್ಮದಿ ನಮ್ಮ ಬದುಕಿನ ಶ್ರೇಷ್ಠ ಗಳಿಕೆಯಾಗಬೇಕೆ ಹೊರತು ಚಿನ್ನ, ದುಡ್ಡು, ಆಸ್ತಿಯಲ್ಲ, ನಮ್ಮ ಬದುಕೆಂದರೆ ಸುಖ-ದುಃಖಗಳ ಸಮ್ಮಿಶ್ರಣದ ಸುಂದರ ನಡಿಗೆಯಾಗಬೇಕು, ಆದರೆ ಇತ್ತಿಚಿನ ದಿನಗಳಲ್ಲಿ ಮಾನವ ಐಶ್ವರ್ಯಕ್ಕೆ ಮಾರುಹೋಗಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದರು.

ಮಲ್ಲಯ್ಯಸ್ವಾಮೀಜಿ, ಗುರುಪಾದ ಸ್ವಾಮೀಜಿ, ಭೀಮಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಶರಣಯ್ಯಸ್ವಾಮೀಜಿ, ಪಂಚಾಕ್ಷರಿ ಗವಾಯಿಗಳು, ಶಂಕರಾನಂದ ಸ್ವಾಮಿಜಿ, ಸೋಮಶೇಖರ ಸ್ವಾಮಿಜಿ, ಲಿಂಗಾನಂದ ಸ್ವಾಮಿಜಿ, ಶಿವಕುಮಾರ ಸ್ವಾಮಿಜಿ, ಶರೀಫಶಾಸ್ತ್ರೀ, ಬಸವಾನಂದ ಸ್ವಾಮಿಜಿ, ಲಕ್ಷ್ಮೀತಾಯಿ, ಕೈಲಾಸಪತಿ ಸ್ವಾಮಿಜಿ, ಬಿರಪ್ಪ ಶಾಸ್ತ್ರೀಗಳು, ಹಲವಾರು ಮಾತಾಜಿಗಳು, ಶರಣರು-ಸಂತರು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin