ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಝೈಲೋ ಕಾರ್ ಒಬ್ಬ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

7

ಬೆಳಗಾವಿ,ಫೆ.6- ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಝೈಲೋ ಕಾರ್ ಅಪಘಾತದಲ್ಲಿ ಒಬ್ಬ ಮೃತಪಟ್ಟು, ಮತ್ತೊಬ್ಬನಿಗೆ ಗಂಭೀರ ಗಾಯವಾಗಿದ್ದು, ಐವರು ಜಿಲ್ಲಾಸ್ಪತ್ರೆಗೆ ಇಂದು ದಾಖಲಾಗಿದ್ದಾರೆ.ಪಾಂಡಿಚೇರಿ ಹಾಗೂ ತಮಿಳುನಾಡು ಮೂಲದ ಗೆಳೆಯರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವಿಟಾಗೆ ಮದುವೆಗಾಗಿ ಆಗಮಿಸಿದ್ದರು. ನಿಪ್ಪಾಣಿ ಬಳಿಯ ಎನ್‍ಎಚ್ 4ರ ಶಿಪ್ಪೂರು ಕ್ರಾಸ್ ಬಳಿ ವಾಹನದ ಟೈಯರ್ ಒಡೆದು ಈ ದುರ್ಘಟನೆ ಸಂಭವಿಸಿದೆ. ಆಸ್ಪತ್ರೆಗೆ ಒಯ್ಯುವ ಮಾರ್ಗಮಧ್ಯೆ ನೈವೇಲಿಯ ವಿಮಲರಾಜ್(22) ಅಸುನೀಗಿದ್ದು, ಝೋನಸ್ ಡೆವಿಡ್ ಎಂಬಾತನ ತಲೆಗೆ ಪೆಟ್ಟಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಅಶ್ವೀನ್ ರಾಜ್ (22), ಹುಸೇನ್ ಯಾಸೀನ್ (22), ಸೆಂಥೀಲ್ ನಂದಗೋಪಾಲ(22), ಅಬ್ದುಲ್ ಬಸೀದ್ ಕಲಾಂ(22), ಅರವಿಂದನ್ ಹರಿಕೃಷ್ಣ(26) ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿಪ್ಪೂರ ಕ್ರಾಸ್, ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಘಟನೆ ನಡೆದಿದ್ದು, ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕರು ತಮಿಳು ಭಾಷಿಕರಾಗಿದ್ದರಿಂದ ಮಾತುಕತೆಗಾಗಿ ತಮಿಳು ನಾಗರಿಕರ ಬೆಳಗಾವಿ ಪ್ರತಿನಿಧಿಗಳ ಸಹಾಯ ಪೊಲೀಸರು ಪಡೆದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin