ಶ್ರೇಷ್ಠ ಸಂಗೀತ ಕಲಾವಿದ ಸರಳ ಜೀವಿ ಪಂ. ಬೀಮಸೇನ ಜೋಶಿ

ಈ ಸುದ್ದಿಯನ್ನು ಶೇರ್ ಮಾಡಿ

11

ಗದಗ,ಫೆ.6- ತಾಲೂಕಿನ ಅನಘ್ರ್ಯ ರತ್ನ, ದೇಶದ ಅತ್ಯುನ್ನತ ಗೌರವಗಳಾದ ಪದ್ಮವಿಭೂಷಣ, ಭಾರತ ರತ್ನ ಪ್ರಶಸ್ತಿ ಪುರಸ್ಕಂತ ಪಂ. ಭೀಮಸೇನ್ ಜೋಶಿ ಅವರು ವಿಶ್ವದ ಶ್ರೇಷ್ಠ ಸಂಗೀತಗಾರರಲ್ಲಿ ಒಬ್ಬರಾಗಿದ್ದರು. ಸರಳ ಜೀವಿಗಳಾಗಿದ್ದು ತಮ್ಮ ಶಿಷ್ಯರನ್ನು ಪ್ರೀತಿ ವಿಶ್ವಾಸದಿಂದ ನೋಡಿ ಕೊಳ್ಳುತ್ತಿದ್ದರು ಎಂದು ಭೀಮಸೇನ್ ಜೋಶಿ ಅವರ ನೇರ ಶಿಷ್ಯರಾದ ಪಂ ಅರವಿಂದ ಹುಯಿಲಗೋಳಕರ ಹೇಳಿದರು.ತಮ್ಮ ನಿವಾಸದಲ್ಲಿ ಪ್ರತಿಷ್ಠಾನದ ವತಿಯಿಂದ ನೆರವೇರಿದ ಪಂ. ಭೀಮಸೇನ್ ಜೋಶಿಯವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ಗುರುಗಳೊಂದಿಗಿನ ನೆನಪುಗಳನ್ನು ಸದಸ್ಯರೊಂದಿಗೆ ಹಂಚಿಕೊಂಡರು. ಪಂ. ಭೀಮಸೇನ್ ಜೋಶಿಯವರು ತಮ್ಮ ಶಿಷ್ಯರಿಗೆ ತಮ್ಮ ಎಲ್ಲ ಸಂಗೀತ ವಿದ್ಯೆಯನ್ನು ಧಾರೆಯೆರೆದಿದ್ದಾರೆ. ಅವರೊಬ್ಬ ಶ್ರೇಷ್ಠ ಕಲಾವಿದರಾಗಿದ್ದರು. ಸಾಮಾನ್ಯರೊಂದಿಗೆ ಸಾಮಾನ್ಯರಂತೆ ಬೆರೆಯುತ್ತಿದ್ದರು.

ತಾವು ಸಂಗೀತ ಕಾರ್ಯಕ್ರಮಗಳಿಗೆ ಹೋದಲ್ಲೆಲ್ಲ ತಮ್ಮ ಶಿಷ್ಯರಿಗೆ ಒಂದು ವಿಶಿಷ್ಠ ರೀತಿಯ ಮಾರ್ಗದರ್ಶನ ನೀಡುತ್ತಿದ್ದರು. ಉತ್ತರ ಕರ್ನಾಟಕ ಎಂದರೆ ಅವರಿಗೆ ಅಪಾರ ಪ್ರೀತಿ. ಅವರನ್ನು ನೆನೆಯುವುದೇ ಶಿಷ್ಯರಿಗೆ ಸಂಭ್ರಮ ಎಂದು ಭೀಮಸೇನ ಜೋಶಿಯವರೊಂದಿಗಿನ ಗುರು-ಶಿಷ್ಯ ಸಂಬಂಧದ ಹಲವಾರು ಘಟನೆಗಳನ್ನು ನೆನಪಿಸಿಕೊಂಡರು.  ಗಣ್ಯ ಉದ್ಯಮಿಗಳು ಹಾಗೂ ಪ್ರತಿಷ್ಠಾನದ ಉಪಾಧ್ಯಕ್ಷ ವಿಶ್ವನಾಥ ರಾಮನಕೊಪ್ಪ ಮಾತನಾಡಿ ಪಂ. ಭೀಮಸೇನ್ ಜೋಶಿ ಅವರು ತಮ್ಮ ಬಾಲ್ಯವನ್ನು ಕಳೆದ ಹಾಗೂ ಅವರ ಪ್ರೀತಿಯ ನಗರವಾದ ಗದುಗಿನಲ್ಲಿ ಪ್ರತಿಷ್ಠಾನವು ಮೇಲಿಂದ ಮೇಲೆ ಉತ್ತಮ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲು ಬದ್ಧವಾಗಿದೆ ಎಂದು ಹೇಳಿದರು. ಸಮಾರಂಭದಲ್ಲಿ ಅನೀಲ ಇನಾಮದಾರ, ಅನೀಲ ತೆಂಬದಮನಿ, ಸುರೇಶ ವೈದ್ಯ, ವ್ಹಿ.ಆರ್. ಗುಡಿ, ಎಂ. ರಾಜಣ್ಣ, ಉಷಾ ಕಾರಂತ, ಶ್ರೀಕಾಂತ ಹೂಲಿ ಮುಂತಾದವರು ಉಪಸ್ಥಿತರಿದ್ದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin