ಉದ್ಯಮಿ ವಿಜಯ್ ಮಲ್ಯ ಹಿನ್ನೆಡೆ : ಯುಬಿಹೆಚ್‌ಎಲ್ ಸಂಸ್ಥೆ ಮುಚ್ಚುವಂತೆ ಹೈಕೋರ್ಟ್ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Vijay-Malya

ಬೆಂಗಳೂರು. ಫೆ.07 : ಉದ್ಯಮಿ ವಿಜಯ್ ಮಲ್ಯ ಸಾಲಕ್ಕೆ ಜಾಮೀನು ಹಾಕಿದ್ದ ಯುನೈಟೆಡ್ ಬ್ರೇವರಿಸ್ ಹೋಲ್ಡಿಂಗ್ಸ್ ಲಿ.(ಯು.ಬಿ.ಹೆಚ್.ಎಲ್.) ಸಂಸ್ಥೆಯನ್ನು ಮುಚ್ಚುವಂತೆ ಹೈಕೋರ್ಟ್ ಆದೇಶ ನೀಡಿದ್ದು, ಸಂಸ್ಥೆಯ ಆಸ್ತಿ ಮಾರಾಟ ಮಾಡಿ ಸಾಲ ಪಾವತಿ ಮಾಡುವಂತೆ ಆದೇಶ ನೀಡಿದೆ. ಈ ಮೂಲಕ ಉದ್ಯಮಿ ವಿಜಯ್ ಮಲ್ಯಗೆ ಹಿನ್ನಡೆಯಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಬ್ಯಾಂಕುಗಳ ಸಲ್ಲಿಕೆ ಮಾಡಿದ್ದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ವಿನೀತ್ ಕೋಠಾರಿ ಅವರು, ಯುಬಿಹೆಚ್‌ಎಲ್ ಸಂಸ್ಥೆಯನ್ನು ಮುಚ್ಚುವಂತೆ ಆದೇಶ ನೀಡಿದ್ದಾರೆ. ಅಲ್ಲದೆ ಸಂಸ್ಥೆಗೆ ಸಂಬಂಧಿಸಿದ ಎಲ್ಲ ಆಸ್ತಿ-ಪಾಸ್ತಿಗಳನ್ನು ಲೆಕ್ಕಾ ಹಾಕಲು ಮತ್ತು ಮಾರಾಟ ಮಾಡಲು ಅಫಿಷಿಯಲ್ ಲಿಕ್ವಿಡೇಟರ್ ನೇಮಕ ಮಾಡಿ ಆದೇಶ ಹೊರಡಿಸಿದೆ.

ಕಿಂಗ್ ಫಿಶರ್ ಏರ್ ಲೈನ್ಸ್ ಸಾಲ ಪಡೆಯಲು ಯು.ಬಿ.ಹೆಚ್.ಎಲ್. ಗ್ಯಾರಂಟರ್ ಆಗಿದೆ. ಈ ಹಿನ್ನಲೆಯಲ್ಲಿ ಬ್ಯಾಂಕ್ ಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿ, ಲಿಕ್ವಿಡೇಟರ್ ನೇಮಕ ಮಾಡಬೇಕು. ಆಸ್ತಿ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದವು.  ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಯು.ಬಿ.ಹೆಚ್.ಎಲ್. ಮುಚ್ಚಿ, ಲಿಕ್ವಿಡೇಟರ್ ನೇಮಕ ಮಾಡಲು ಆದೇಶ ಹೊರಡಿಸಿದೆ. ಯುಬಿಹೆಚ್ ಎಲ್ ನಲ್ಲಿ ವಿಜಯ್ ಮಲ್ಯ ಶೇ.52 ರಷ್ಟು ಷೇರುಗಳನ್ನು ಹೊಂದಿದ್ದಾರೆ.

ಬಂಧನದ ಅವಧಿ ವಿಸ್ತರಣೆ :

ವಿಜಯ್ ಮಲ್ಯ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಂಬೈನಲ್ಲಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಕಿಂಗ್ ಫಿಷರ್ ವಿಮಾನ ಸಂಸ್ಥೆ ಹಾಗೂ ಐಡಿಬಿಐ ಬ್ಯಾಂಕ್ ನ ಒಟ್ಟು 9 ಮಂದಿ ಮಾಜಿ ಸಿಬ್ಬಂದಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಫೆಬ್ರವರಿ 20ರವರೆಗೂ ವಿಸ್ತರಣೆ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin