ಕೈಲಾಶ್ ಸತ್ಯಾರ್ಥಿಯವರ ನೋಬೆಲ್ ಪ್ರಶಸ್ತಿ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

Kailash-Satyarthi

ನವದೆಹಲಿ, ಫೆ.7-ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿಯವರ ಮನೆಯಲ್ಲಿ ಕಳ್ಳತನವಾಗಿದ್ದು, ನಗ-ನಾಣ್ಯದೊಂದಿಗೆ ನೊಬೆಲ್ ಪ್ರಶಸ್ತಿಯನ್ನೂ ದೋಚಲಾಗಿದೆ. ಈಶಾನ್ಯ ದೆಹಲಿಯ ಶಾಲ್ಯಾ ಪ್ರದೇಶದಲ್ಲಿರುವ ಕೈಲಾಶ್ ಕಾಲೋನಿಯ ಅಲವಾರಿ ಅಪಾಟ್‍ಮೆಂಟ್‍ನಲ್ಲಿರುವ ಅವರ ಮನೆಯ ಬೀಗ ಮುರಿದು ಚಿನ್ನಾಭರಣಗಳು, ನಗದು ಹಾಗೂ ನೊಬೆಲ್ ಪ್ರಶಸ್ತಿ ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಕಳ್ಳರು ಕದ್ದೊಯ್ಡಿದ್ದಾರೆ.  ಸತ್ಯಾರ್ಥಿ ಪ್ರಸ್ತುತ ವಿದೇಶದಲ್ಲಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಬೀಗ ಮುರಿದು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೈೀಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.   ಸತ್ಯಾರ್ಥಿ ಅವರಿಗೆ 2014ರಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು. ಪಾಕಿಸ್ತಾನದ ಮಾನವ ಹಕ್ಕುಗಳ ರಕ್ಷಣಾ ಕಾರ್ಯಕರ್ತೆ ಯುಸೂಫ್ ಮಲಾಲಾ ಅವರೊಂದಿಗೆ ಇವರು ಪ್ರಶಸ್ತಿ ಹಂಚಿಕೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin