ಜಯಾ ಸಾವಿನ ಹೊಸ ರಹಸ್ಯ ಬಿಚ್ಚಿಟ್ಟ AIADMK ಮಾಜಿ ನಾಯಕ ಪಾಂಡಿಯನ್

ಈ ಸುದ್ದಿಯನ್ನು ಶೇರ್ ಮಾಡಿ

Jayalalitha--01

ಚೆನ್ನೈ, ಫೆ.7-ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಕೊಲೆ ಮಾಡಲಾಗಿದೆ. ಇದಕ್ಕೆ ತಮಿಳುನಾಡಿನ ನಿಯೋಜಿತ ಮುಖ್ಯಮಂತ್ರಿ ಶಶಿಕಲಾ ನಟರಾಜನ್ ಅವರೇ ನೇರ ಹೊಣೆ ಎಂದು ಆರೋಪಿಸಿರುವ ಎಐಎಡಿಎಂಕೆ ಮಾಜಿ ನಾಯಕ ಪಿ.ಎಚ್. ಪಾಂಡಿಯನ್, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.   ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲು ತುದಿಗಾಲಲ್ಲಿ ನಿಂತಿರುವ ಶಶಿಕಲಾ ಅವರಿಗೆ ಈ ಆರೋಪ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ.  ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಂಡಿಯನ್, ಜಯಲಲಿತಾ ಅವರದು ಸಹಜ ಸಾವಲ್ಲ. ಪೋಯೆಸ್ ಗಾರ್ಡನಲ್ಲಿರುವ ಅವರ ಬಂಗಲೆಯಲ್ಲಿ ಜಯಾಲಲಿತಾ ಜಗಳವಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಅವರನ್ನು ಜೋರಾಗಿ ತಳ್ಳಿದ. ಕೆಳಗೆ ಬಿದ್ದ ಅವರು ತೀವ್ರ ಅಸ್ವಸ್ಥರಾದರು. ಆವರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ತಿಳಿಸಿದ್ಧಾರೆ.

ಈ ಎಲ್ಲ ವಿಷಯಗಳನ್ನು ತಿಳಿದಿದ್ದ ಶಶಿಕಲಾ ಇದನ್ನು ಗೋಪ್ಯವಾಗಿ ಇಟ್ಟರು. ಜಯಲಲಿತಾ ಅವರ ಸಾವಿಗೆ ಇವರೇ ಹೊಣೆ. ಹೀಗಾಗಿ ಶಶಿಕಲಾರನ್ನು ತನಿಖೆಗೆ ಒಳಪಡಿಸಬೇಕು ಮತ್ತು ಮುಖ್ಯಮಂತ್ರಿಯಾಗಲು ಅವರಿಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin