ತೋಟಕ್ಕೆ ನುಗ್ಗಿದ 9 ಕಾಡಾನೆಗಳು : ಬೆಳೆ ನಾಶ

ಈ ಸುದ್ದಿಯನ್ನು ಶೇರ್ ಮಾಡಿ

malavali-2

ಮಳವಳ್ಳಿ, ಫೆ.7- ತಾಲ್ಲೂಕಿನ ಹಲಗೂರು ಸಮೀಪದ ನಂದಿಪುರ ಗ್ರಾಮದ ನಾಗರಾಜು ಎಂಬುವವರ ತೋಟಕ್ಕೆ ಬಸವನಬೆಟ್ಟದಿಂದ ಬಂದ 9 ಕಾಡಾನೆಗಳು ರಾತ್ರಿ ತೋಟಕ್ಕೆ ಲಗ್ಗೆ ಹಾಕಿ 15 ಮಾವಿನ ಸಸಿ 10 ತೆಂಗಿನ ಸಸಿಗಳನ್ನು ಮುರಿದು ಹಾಕಿರುವುದಲ್ಲದೆ ರಾಗಿ ಹುಲ್ಲಿನ ಮೇದೆ ಕೆಡವಿ ತಿಂದು ತುಳಿದು ನಾಶ ಪಡಿಸಿರುವುದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ನಾಗರಾಜು ಅವರು ತಮ್ಮ ಜಮೀ£ನಲ್ಲಿ ಬೆಳೆದಿದ್ದ ರಾಗಿಯನ್ನು ಕುಯ್ದು ಮೆದೆ ಹಾಕಿದ ಸ್ಥಳಕ್ಕೆ ಆಹಾರವನ್ನು ಹುಡುಕಿಕೊಂಡು ಬಂದ ಕಾಡಾನೆಗಳು ರಾಗಿ ಹುಲ್ಲನ್ನು ತಿಂದು ತುಳಿದು ನಾಶ ಪಡಿಸಿರುತ್ತವೆ.

ಅದರ ಜೊತೆಗೆ ಜಮೀನಿನಲ್ಲಿದ್ದ 15 ಮಾವಿನ ಸಸಿಗಳನ್ನು ಮುರಿದು ಹಾಗೂ 10 ತೆಂಗಿನ ಸಸಿಗಳ ಸುಳಿಯನ್ನು ಮುರಿದು ಹಾಕಿವೆ ಹಾಗೂ ತೋಟಕ್ಕೆ ನೀರು ಹಾಯಿಸುವ ಪಂಪ್ ಸೆಟ್ ಪೈಪುಗಳನ್ನು ಮುರಿದು ಹಾಕಿರುವುದರಿಂದ ಲಕ್ಷ ರೂ. ನಷ್ಟ ಸಂಭವಿಸಿರುತ್ತದೆ. ಎಂದಿನಂತೆ ತೋಟಕ್ಕೆ ಹೋದ ನಾಗರಾಜುವಿಗೆ ಕಾಡಾನೆಗಳು ತಮ್ಮ ಜಮೀನಿಂದ ಕಾಡಿನತ್ತಾ ಹೋಗುತ್ತಿರುವುದನ್ನು ನೋಡಿ ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿರುತ್ತಾರೆ.ಆನೆಗಳ ನಿರಂತರ ದಾಳಿಯಿಂದ ಆತಂಕಕ್ಕೀಡಾಗಿರುವ ಹಲಗೂರು ಭಾಗದ ರೈತರು ಆನೆಗಳ ದಾಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin