ಪ್ರಸಕ್ತ ಅಧಿವೇಶನದಲ್ಲೇ ಕಂಬಳಕ್ಕೆ ವಿಧೇಯಕ ಮಂಡಿಸುವೆ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiha-01-Kambala

ಬೆಂಗಳೂರು, ಫೆ.7-ಪ್ರಸಕ್ತ ಅಧಿವೇಶನದಲ್ಲೇ ಸಾಂಸ್ಕøತಿಕ ಕ್ರೀಡೆ ಕಂಬಳಕ್ಕೆ ಸಂಬಂಧಿಸಿದ ವಿಧೇಯಕ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದರು. ಇಂದು ಬೆಳಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕರಾದ ಸುನೀಲ್‍ಕುಮಾರ್ ಮತ್ತು ರಘು ಅವರು ಕಂಬಳಕ್ಕೆ ಸಂಬಂಧಿಸಿದ ಫಲಕಗಳನ್ನು ಪ್ರದರ್ಶಿಸಿ ಕಂಬಳ ಬೇಕು… ಎಂದು ಒತ್ತಾಯಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ನೀವು ಕೇಳುವುದಕ್ಕೂ  ಮುಂಚೆಯೇ ವಿಧೇಯಕ ತರಲು ಸರ್ಕಾರ ತೀರ್ಮಾನಿಸಿದೆ. ಪ್ರಚಾರಕ್ಕಾಗಿ ನೀವು ಈ ರೀತಿ ಮಾಡುತ್ತಿದ್ದೀರಿ ಎಂದು ಛೇಡಿಸಿದರು. ನಂತರ ಸಭಾಧ್ಯಕ್ಷರು ಪ್ರಶ್ನೋತ್ತರ ಕಾರ್ಯಕಲಾಪವನ್ನು ಕೈಗೆತ್ತಿಕೊಂಡರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin