ಬ್ಯಾಂಕ್ ಸಾಲ : ಸಮಯಾವಕಾಶ ನೀಡಲು ನೇಕಾರ ಕುಟುಂಬ ಆರ್ತನಾದ

ಈ ಸುದ್ದಿಯನ್ನು ಶೇರ್ ಮಾಡಿ

2
ಗುಳೇದಗುಡ್ಡ,ಫೆ.7- ಬ್ಯಾಂಕಿನಿಂದ ಸಾಲ ಪಡೆದ ನೇಕಾರ ಕುಟುಂಬವೊಂದು ಸಾಲ ಬಾಕಿ ಉಳಿಸಿಕೊಂಡಿದ್ದರಿಂದ ಮನೆಯ ನೆಲೆಯನ್ನು ಕಳೆದುಕೊಳ್ಳುವ ಪ್ರಸಂಗ ಎದುರಾಗಿದೆ. ಜಗದ ಜನರ ಮಾನ ಮುಚ್ಚುವ ನೇಕಾರ ಇಂದು ತನ್ನ ಮಾನವನ್ನೇ ಹರಾಜಿಗಿಡುವ ಪರಿಸ್ಥಿತಿ ಬಂದೊದಗಿದ್ದು ವಿಪರ್ಯಾಸದ ಸಂಗತಿ.ಗುಳೇದಗುಡ್ಡದ ಚಂದ್ರಶೇಖರ ಹೊನ್ನಳ್ಳಿ ಅವರದು ನೇಕಾರಿಕೆಕುಟುಂಬ. ತಂದೆ ಟೋಪಣ್ಣ, ತಾಯಿ ಸುವರ್ಣಾ ನೇಕಾರಿಕೆ ವೃತ್ತಿ ಮಾಡುತ್ತ ಬಂದವರು. ಇಬ್ಬರು ಸಹೋದರಿಯರು ಓದಿಕೊಂಡಿದ್ದರೂ ಈ ನೇಕಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಗುಳೇದಗುಡ್ಡದ ಪರಂಪರಾಗತ ಕೈಮಗ್ಗ ನೇಕಾರಿಕೆಯಲ್ಲಿ ಖಣಗಳನ್ನು ನೇಯುತ್ತ ಬಂದವರು ಇವರ ತಂದೆ. ಕೈಮಗ್ಗಗಳು ಮೂಲೆ ಸೇರಿದ್ದರಿಂದ ಮಗ ಚಂದ್ರಶೇಖರ ಮನೆಯಲ್ಲಿ ಪವರಲೂಮ್ ಮಗ್ಗಗಳನ್ನು ಹಾಕುವ ವಿಚಾರ ಮಾಡಿದರು. ಅದಕ್ಕಾಗಿ ಬ್ಯಾಂಕ್‍ಗಳನ್ನು ಅಲೆದಾಡಿ ಕೊನೆಗೆ ಬಾಗಲಕೋಟೆಯಲ್ಲಿನ ಮಹಾರಾಷ್ಟ್ರದ ಕೊಲ್ಲಾಪೂರ ಮೂಲದ ಆರ್‍ಬಿಎಲ್ ಹಿಂದಿನ ಹೆಸರು ರತ್ನಾಕರ ಬ್ಯಾಂಕ್ ಲಿಮಿಟೆಡ್ ಬ್ಯಾಂಕ್‍ನಲ್ಲಿ ಮನೆಯನ್ನು ಆಧಾರವಾಗಿಟ್ಟುಕೊಂಡು 30-4-2015ರಂದು ಸಾಲ ಪಡೆದುಕೊಂಡರು. ಪ್ರತಿ ತಿಂಗಳ 5ನೇ ತಾರೀಖಿನಂದು 20,101 ರೂ.ನಂತೆ ಸಾಲ ಮರುಪಾವತಿ ಮಾಡಬೇಕು ಎಂದು ಬ್ಯಾಂಕ್ ತಿಳಿಸಿತ್ತು.

ಸಾಲ ಪಡೆದ ಚಂದ್ರಶೇಖರ ಅವರು 8 ಪವರಲೂಮ್ ಮಗ್ಗಗಳನ್ನು ತಂದು ಮನೆಯಲ್ಲಿ ಹಾಕಿಕೊಂಡು ಮನೆಯವರೆಲ್ಲ ನೇಕಾರಿಕೆಯಲ್ಲಿ ತೊಡಗಿಕೊಂಡರು. ಇತ್ತ ಸಾಲದ ಕಂತನ್ನು ತುಂಬುತ್ತಾ ಬಂದು ಡಿಸೆಂಬರ್ 2015ರವರೆಗೆ ಸಾಲ ಮರುಪಾವತಿ ಮಾಡಿದರು. ಆದರೆ ಡಿಸೆಂಬರ್ 2015ರ ನಂತರದಲ್ಲಿ ಸಾಲದ ಕಂತನ್ನು ತುಂಬಲಿಲ್ಲ.ಹೀಗಾಗಿ ಬ್ಯಾಂಕ್ ಇವರ ಸಾಲವನ್ನು ಎನ್‍ಪಿಎಗೆ ಸೇರಿಸಿದ್ದು, ಈಗ ಮನೆಯನ್ನು ಸ್ವಾದೀನ ಪಡಿಸಿಕೊಳ್ಳವ ನೋಟಿಸು ಜಾರಿ ಮಾಡಿದೆ. ಈ ನೋಟಿಸು ಜಾರಿ ಮಾಡುವ ಮೊದಲು ಚಂದ್ರಶೇಖರ ಅವರು ಬ್ಯಾಂಕ್‍ಗೆ ದಿನಾಂಕ 23-12-2016ರಂದು ಒಂದು ಲಕ್ಷರೂಪಾಯಿಯನ್ನುಜಮೆ ಮಾಡಿದ್ದಾರೆ.ಆದರೂ 10-1-2017ರಂದು ಆರ್‍ಬಿಎಲ್ ಬ್ಯಾಂಕ್ ಸಾಲಗಾರರ ಆಸ್ತಿಯನ್ನು ಸಾಂಕೇತಿಕ ಸ್ವಾದೀನ ಸೂಚನೆಯ ಪ್ರಕಟಣೆಯನ್ನು ಪತ್ರಿಕೆಯಲ್ಲಿ ನೀಡಿದೆ.8 ಲಕ್ಷರೂ. ಸಾಲ ಇಗ 9,55,182ರೂ. ಗೆ ಬಂದಿದೆ.

ಇದರಿಂದ ನೇಕಾರಿಕೆ ಕುಟುಂಬ ದಿಕ್ಕುತಪ್ಪಿದಂತಾಗಿದೆ. ಸಾಲದ ಮರುಪಾವತಿ ಅವಧಿಯನ್ನು ಇನ್ನು ಆರೇಳು ತಿಂಗಳು ಹೆಚ್ಚಿಸುವಚಿತೆ ಆರ್.ಬಿ.ಎಲ್. ಬ್ಯಾಂಕ್‍ನ ಬಾಗಲಕೋಟೆ ಶಾಖೆಗೆ ಮಾತ್ರವಲ್ಲದೇ ಹುಬ್ಬಳ್ಳಿ ಹಾಗೂ ಬೆಂಗಳೂರಿಗೂ ಕಚೇರಿಗಳಿಗೆ ಹೋಗಿ ಮನವಿ ಮಾಡಿದ್ದಾರೆ. ನಾವು ಸಾಲವನ್ನು ಮನ್ನಾ ಮಾಡಿ ಎಂದು ಬ್ಯಾಂಕ್‍ನವರಿಗೆ ಹೇಳುವುದಿಲ್ಲ. ಸಾಲ ತುಂಬಲು ನಮಗೆ ಅವಕಾಶ ನೀಡಿ ಎಂದಷ್ಟೇ ಕೇಳಿ ಕೊಳ್ಳುತ್ತಿದ್ದೇವೆ. ನೇಕಾರಿಕೆ ಮಾರುಕಟ್ಟೆ ಸಮಸ್ಯೆ ಹಾಗೂ ನಮ್ಮ ಅಜ್ಜಿಯವರಿಗೆ ಬ್ರೇನ್‍ಟೂಮರ್ ಆvದ್ದರಿಂದ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಿದೆ ಆದರೂ ಅವರು ತೀರಿ ಹೋದರು. ಇವೆಲ್ಲ ಅನಾನುಕೂಲತೆಯಿಂದಾಗಿ ನಾವು ಸಾಲದ ಕಂತನ್ನು ತುಂಬಲು ಸಾಧ್ಯವಾಗಲಿಲ್ಲ. ಇಂತಹ ಸಂದರ್ಭದಲ್ಲಿಯೂ ಡಿಸೆಂಬರ್ ತಿಂಗಳಲ್ಲಿ ಒಂದು ಲಕ್ಷ ಸಾಲಕ್ಕೆ ಭರಿಸಿದ್ದೇನೆ.

ಆದರೂ ನಮಗೆ ಬ್ಯಾಂಕ್‍ನವರು ಸಾಲ ಮರುಪಾವತಿಗೆ ಕಾಲಾವಕಾಶ ನೀಡುತ್ತಿಲ್ಲ. ಇದರಿಂದ ಮನೆಮಂದಿ ಮಾನಸಿಕವಾಗಿ ಕುಗ್ಗಿಹೋಗಿದ್ದೇವೆ. ಬಾಂಕಿನವರ ಕಿರುಕುಳದಿಂದಾಗಿ ನನಗೆ ಹಾಗೂ ನಮ್ಮ ಕುಟುಂಬಕ್ಕೆ ಏನಾದರೂ ಅನಾಹುತವಾದರೆ ಆರ್.ಬಿ.ಎಲ್. ಬ್ಯಾಂಕ್ ಹಾಗೂ ಬ್ಯಾಂಕ್‍ನ ಅಧಿಕಾರಿಗಳು ಕಾರಣವಾಗುತ್ತಾರೆ ಎಂದು ನೋವಿನಿಂದ ಹೇಳುತ್ತಾರೆ.
ಆರ್‍ಬಿಎಲ್ ಸಾಲ ವಸೂಲಿ ಅಧಿಕಾರಿ ಡ್ಯಾನಿಯಲ್ ಮಡಗುಂಡಿ ಅವರು ಮನೆಗೆ ಬಂದು ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ಬೂಟು ಹಾಕಿಕೊಂಡೇ ಮನೆಯೊಳಗೆ ಬಂದು ದಬಾಯಿಸುತ್ತಾರೆ. ಹರೆಯದ ಹೆಣ್ಣುಮಕ್ಕಳಿರುವ ನಮ್ಮ ಕುಟುಂಬ ಮಾನಸಿಕವಾಗಿ ಕಿರುಕುಳ ಅನುಭವಿಸು ವಂತಾಗಿದೆ. ನಮಗೆ ಮಾನಮರ್ಯಾದೆ ಇಲ್ಲದಂತಾಗಿದೆ. ಇದರಿಂದ ಯಾವಾಗ ನಾವು ಮುಕ್ತಿ ಸಿಗುತ್ತದೆಯೋ? ಎಚಿದು ಚಂದ್ರಶೇಖರ ಅವರ ಸಹೋದರಿ ಗಂಗಮ್ಮ ಕಣ್ಣೀರು ಹಾಕುವುದು ನೋಡಿದರೆ ಕರಳು ಚುರ್ ಎನ್ನದೇ ಇರದು.

ಸಾಲ ಮರುಪಾವತಿ ಅವಧಿಯನ್ನು ಹೆಚ್ಚಿಸುವಂತೆ ಬ್ಯಾಂಕ್‍ನ ಹುಬ್ಬಳ್ಳಿ ಶಾಖೆಗೆ ಹೋದಾಗ ನಮಗೆ ಒಳಗೆ ಬೀಡಲಿಲ್ಲ. ತಾಸುಗಟ್ಟಲೇ ಹೊರೆಗೆ ನಿಲ್ಲಿಸಿದರು. ನಮ್ಮನ್ನು ನಾಯಿಯನ್ನು ನೋಡಿಕೊಂಡಂತೆ ನೋಡಿಕೊಂಡರು ಎಚಿದು ಚಂದ್ರಶೇಖರ ಅವರ ತಾಯಿ ನೋವಿನಿಂದ ಹೇಳುತ್ತಾರೆ. ನೇಕಾರಿಕೆ ಕುಟುಂಬದಿಂದ ಬಂದಿರುವ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ, ಜವಳಿ ಸಚಿವ ರುದ್ರಪ್ಪ ಲಮಾಣಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ ಹಾಗೂ ಕೆಎಚ್‍ಡಿಸಿ ನಿಗಮದ ಅಧ್ಯಕ್ಷ ರವೀಂದ್ರಕಲ್ಬುರ್ಗಿ, ಆರ್.ಬಿ.ಎಲ್. ಬ್ಯಾಂಕ್‍ನ ಎಂ.ಡಿ. ವಿಶ್ವವೀರ ಅಹುಜ ಅವರು ಬಡ ನೇಕಾರರ ನೆರವಿಗೆ ಬಂದು ಸಾಲ ಮರುಪಾವತಿಗೆ 6-7ತಿಂಗಳ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಸಾಲಗಾರ ಚಂದ್ರಶೇಖರ ಮನವಿ ಮಾಡುತ್ತಾರೆ. ಚಂದ್ರಶೇಖರ ಹೊನ್ನಳ್ಳಿ ಸಾಲಗಾರ ಹಾಗೂ ಮೂವರು ಸಹ ಸಾಲರರಾಗಿ ಏಪ್ರಿಲ್ 2015ರಲ್ಲಿ ಆರ್.ಬಿ.ಎಲ್ ಬ್ಯಾಂಕ್ ಬಾಗಲಕೋಟೆ ಶಾಖೆಯಿಂದ ಸಣ್ಣ ವ್ಯಾಪರಕ್ಕಾಗಿ 8 ಲಕ್ಷ ರೂ. ಸಾಲವನ್ನು ಮನೆ ಆಸ್ತಿಯ ಮೇಲೆ ಪಡೆದುಕೊಂಡಿದ್ದಾರೆ.

ತಿಂಗಳ ಸಾಲದ ಕಂತಿನಲ್ಲಿ ಡಿಸೆಂಬರ್ 2015ರ ನಚಿತರದ ಕಂತು ಕಟ್ಟಿಲ್ಲ. ಸಾಲ ಮರುಪಾವತಿಗೆ ಈಗಾಗಲೇ ಅವರಿಗೆ ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ನಮ್ಮ ಬ್ಯಾಂಕ್‍ನ ನಿಯವ್ಮದಂತೆ ಕ್ರಮಕೈಗೊಂಡಿದ್ದೇನೆ ಅಷ್ಟೆ. ನಾನು ಸಾಲಗಾರರ ಮೇಲೆ ಯಾವುದೇ ದಬ್ಬಾಳಿಕೆ ಮಾಡಿಲ್ಲ ಎಚಿದು ಆರ್.ಬಿ.ಎಲ್ ಬ್ಯಾಂಕ್‍ನ ಸಾಲ ವಸೂಲಿ ಅಧಿಕಾರಿ ಡ್ಯಾನಿಯಲ್ ಮಡಗುಂಡಿ ಹೇಳದರು. ನೇಕಾರಿಕೆಯಲ್ಲಿನ ನಷ್ಟದಿಂದಾಗಿ ಆರ್.ಬಿ.ಎಲ್. ಬ್ಯಾಂಕ್‍ನಲ್ಲಿ ಪಡೆದಿರುವ ಸಾಲ ಉಳಿಸಿಕೊಂಡಿದ್ದೇನೆ. ಸಾಲ ಮರುಪಾವತಿಗೆ ಹೆಚ್ಚಿನ ಅವಕಾಶ ನೀಡಿ ಎಂದು ಬ್ಯಾಂಕ್‍ನವರನ್ನು ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಬ್ಯಾಂಕ್‍ನವರ ಕಿರುಕುಳದಿಂದಾಗಿ ನಮ್ಮ ಕುಟುಂಬ ಬದುಕುವುದು ದುಸ್ತರವಾಗಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಏನಾದರೂ ಅನಾಹುತವಾದರೆ ಅದಕ್ಕೆ ಆರ್.ಬಿ.ಎಲ್ ಬ್ಯಾಂಕ್ ಹಾಗೂ ಅದರ ಅಧಿಕಾರಿಗಳು ನೇರ ಹೊಣೆಯಾಗುತ್ತಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin