ಮಗುವಿನ ಅಳು ಕೇಳಲಾರದೆ ಕಾಲು ಮುರಿದ ಕ್ರೂರಿ ವಾರ್ಡ್ ಬಾಯ್..! (Video)
https://www.youtube.com/watch?v=YJ0IN6BvDTo
ಡೆಹ್ರಡೂನ್, ಫೆ.7-ಹುಟ್ಟಿದ ಮೂರು ದಿನದ ಮಗುವಿನ ಅಳುವನ್ನು ಕೇಳಲಾರದ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಮಗುವಿನ ಕಾಲು ಮುರಿದು ಕ್ರೌರ್ಯ ಮೆರೆದಿರುವ ಘಟನೆ ಉತ್ತರಾಖಂಡದ ಈರ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಗುವನ್ನು ಆರೈಕೆ ಮಾಡಲು ಪಕ್ಕದ ವಾರ್ಡ್ನಲ್ಲೇ ಬಿಟ್ಟಿದ್ದರು. ಮಗುವನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿಯು ಮಗು ನಿರಂತರವಾಗಿ ಅಳುತ್ತಲೇ ಇದ್ದುದನ್ನು ಸಹಿಸಲಾರದೆ ಕೋಪದಿಂದ ಎಳೆಯ ಮಗುವಿನ ಕಾಲನ್ನು ಮುರಿದಿದ್ದಾನೆ.
ಬಳಿಕ ಮಗು ಅಳುವುದನ್ನು ನಿಲ್ಲಿಸಿತ್ತು. ಮಗು ಇದರಿಂದ ಬದುಕಿದೆಯೋ, ಸಾವನ್ನಪ್ಪಿದೆಯೋ ತಿಳಿದುಬಂದಿಲ್ಲ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಂತಹ ನೀಚ ಕೃತ್ಯ ಎಸಗಿದ್ದ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ವ್ಯಾಪಕ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಲ್ಲದೆ 3 ದಿನದ ಮಗುವಿನ ಬಗ್ಗೆ ಜನರು ಮರುಕ ವ್ಯಕ್ತಪಡಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS