ಮೊಬೈಲ್ ಕದ್ದಿದ್ದ ಆರ್‍ಟಿಐ ಕಾರ್ಯಕರ್ತನ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಫೆ.6- ಬ್ಯಾಂಕ್‍ನ ನೌಕರರೊಬ್ಬರ ಮೊಬೈಲ್ ಕದ್ದಿದ್ದ ಆರ್‍ಟಿಐ ಕಾರ್ಯಕರ್ತನನ್ನು ವಿ.ವಿ.ಪುರಂ ಪೊಲೀಸರು ಬಂಧಿಸಿದ್ದಾರೆ.ನಗರದ ಅಗ್ರಹಾರ ನಿವಾಸಿ ಕೃಷ್ಣಮೂರ್ತಿ ಬಂಧಿತ ಆರ್‍ಟಿಐ ಕಾರ್ಯಕರ್ತ.ಜ.23ರಂದು ವಿ.ವಿ.ಪುರಂನಲ್ಲಿರುವ ವಿಜಯ ಬ್ಯಾಂಕ್‍ಗೆ ಕೃಷ್ಣಮೂರ್ತಿ ತೆರಳಿದ್ದ. ಈ ವೇಳೆ ಬ್ಯಾಂಕ್ ನೌಕರರೊಬ್ಬರ ಗಮನ ಬೇರೆಡೆ ಸೆಳೆದು 40 ಸಾವಿರ ಬೆಲೆ ಬಾಳುವ ಮೊಬೈಲ್‍ನನ್ನು ಕಳವು ಮಾಡಿ ಪರಾರಿಯಾಗಿದ್ದನು.ಈ ಸಂಬಂಧ ನೌಕರ ವಿ.ವಿ.ಪುರಂ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬ್ಯಾಂಕಿನ ಸಿಸಿಟವಿ ವೀಕ್ಷಿಸಿ ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಮೊಬೈಲ್ ಕದ್ದಿರುವುದಾಗಿ ಕೃಷ್ಣಮೂರ್ತಿ ಒಪ್ಪಿಕೊಂಡಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin