ವಿಶ್ವ ಕುಷ್ಟ ರೋಗ ದಿನಾಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

7
ಬಾಗಲಕೋಟೆ,ಫೆ.7– ವಿಶ್ವ ಕುಷ್ಟ ರೋಗ ದಿನಾಚರಣೆಯನ್ನು ಹಾನಗಲ್ ಕುಮಾರೇಶ್ವರ ಆಸ್ಪತ್ರೆ ಹಾಗೂ ಎಸ್.ಎನ್. ಮೆಡಿಕಲ್ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ನಗರ ಆರೋಗ್ಯ ಕೇಂದ್ರದಿಂದ ಆಚರಿಸಲಾಯಿತು.ಜಿಲ್ಲೆಯ ಹಳೆ ಎಪಿಎಮ್‍ಸಿ ಮಾರುಕಟ್ಟೆ ಹತ್ತಿರದ ಕುಷ್ಟ ರೋಗ ಕಾಲೋ ಯಲ್ಲಿ ಸುಮಾರು 32 ಕುಟುಂಬದವರು ವಾಸವಾಗಿರುತ್ತಾರೆ. ಆ. 31ರಂದು ಅಲ್ಲಿರುವ ಜನರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧಿ ವಿತರಿಸಲಾಯಿತು.ಪ್ರಥಮ ಚಿಕ್ಸಿತೆಯ ಪೆಟ್ಟಿಗೆಯನ್ನು ನೀಡಿ, ನಂತರ ಅವರಿಗೆ ಹಣ್ಣು ಮತ್ತು ಲಡ್ಡು ವಿತರಿಸಲಾಯಿತು.ಡಾ. ಬಿ.ಎಸ್. ಮನ್ನಾಪುರ, ಡಾ. ಗೌರಿ ಶಂಕರ, ಡಾ. ಮಂಜುಳಾ ಡಾ. ಸಚಿನದೇಸಾಯಿ, ಡಾ ಶ್ರೀನಿವಾಸ, ಡಾ.ಸುಹಾಸಿನಿ, ನಗರ ಆರೋಗ್ಯ ಕೇಂದ್ರದ ಮುಖ್ಯಸ್ಥರು ಹಾಗೂ ಸ್ನಾತಕೋತ್ತರ ವಿಧ್ಯಾರ್ಥಿ ಡಾ. ಅಂಜನಿ, ತರಬೇತಿ ನಿರತ ವೈದ್ಯರು ಹಾಗೂ ನಗರ ಆರೋಗ್ಯ ಕೇಂದ್ರದ ಸಿಬ್ಬಂಧಿ ವರ್ಗದವರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin