ಸಿಲಿಂಡರ್ ಸ್ಫೋಟ , ಸುಟ್ಟು ಕರಕಲಾಗಿರುವ ಲಕ್ಷಾಂತರ ರೂ. ಮೊತ್ತದ ವಸ್ತುಗಳು

ಈ ಸುದ್ದಿಯನ್ನು ಶೇರ್ ಮಾಡಿ

Cylinder-Blast

ರಾಯಚೂರು, ಫೆ.7-ಜಿಲ್ಲೆಯ ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಬಸವರಾಜ್ ಮ್ಯಾದರ್ ಎನ್ನುವವರಿಗೆ ಸೇರಿದ ಕಟ್ಟಿಗೆ ಅಡ್ಡೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಭಾರೀ ಅನಾಹುತ ಸಂಭವಿಸಿದ್ದು, ಲಕ್ಷಾಂತರ ರೂ. ಮೊತ್ತದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಅಡ್ಡೆಯಲ್ಲಿರುವ ಬಿದಿರು ಬಂಬು, ಮನೆಗೆ ಹಾಕುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಬೆಂಕಿಯ ಕೆನ್ನಾಲಿಗೆ ಇನ್ನೂ ಹೆಚ್ಚು ಪಸರಿಸಿದ್ದು, ಹೆಚ್ಚು ಅನಾಹುತಗಳಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಬೆಂಕಿ ಬಿದ್ದ ಘಟನೆ ನೋಡಲು ನೆರೆದಿದ್ದ ಜನರನ್ನು ಚದುರಿಸಲು ಪೊಲೀಸ್ ಸಿಬ್ಬಂದಿ ಲಾಠಿ ಚಾರ್ಜ್ ಮಾಡಬೇಕಾಯಿತು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin