ಉಳಿತಾಯ ಖಾತೆ ವಿಥ್ ಡ್ರಾ ಮಿತಿಯನ್ನು 50 ಸಾವಿರಕ್ಕೆ ಹೆಚ್ಚಿಸಿದ RBI

ಈ ಸುದ್ದಿಯನ್ನು ಶೇರ್ ಮಾಡಿ

RBI

ನವದೆಹಲಿ, ಫೆ.8 : ನೋಟ್ ಬ್ಯಾನ್ ನಂತರ ಹೇರಿದ್ದ ಹಣ ವ್ಯವಹಾರ ಮಿತಿಗಳನ್ನು ಒಂದೊಂದಾಗಿ ಸಡಿಲಿಸುತ್ತಿರುವ ಆರ್ಬಿಐ ಈಗ ಗ್ರಾಹಕರಿಗೆ ಮಂತ್ತೊಂದು ಸಿಹಿ ಸುದ್ದಿ ನೀಡಿದೆ. ಉಳಿತಾಯ ಖಾತೆಯಿಂದ ವಿಥ್ ಡ್ರಾ ಮಾಡುವ ವಾರದ ಮಿತಿಯನ್ನು 24 ಸಾವಿರ 50 ಸಾವಿರಕ್ಕೆ ಹೆಚ್ಚಿಸಲಾಗಿದ್ದು. ಇದು ಫೆಬ್ರವರಿ 28ರಿಂದ ಅನ್ವಯವಾಗಲಿದೆ.   ಮಾರ್ಚ್ 13ರಿಂದ ಉಳಿತಾಯ ಖಾತೆಯಿಂದ ನಗದು ಹಿಂಪಡೆಯಲು ಯಾವುದೇ ಮಿತಿಯಿಲ್ಲ ಎಂದು ಆರ್ಬಿಐ ಹೇಳಿದೆ.

ರೆಪೊ ದರ ಯಥಾಸ್ಥಿತಿ :

ಆರ್ ಬಿಐ ತನ್ನ ಹಣಕಾಸು ವರ್ಷದ ಮೊದಲ ಎರಡು ತಿಂಗಳ ವಿತ್ತೀಯ ನೀತಿಯನ್ನು ಇಂದು ಪ್ರಕಟಿಸಿದ್ದು, ಬಡ್ಡಿದರದ ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ನೇತೃತ್ವದ 6 ಸದಸ್ಯರನ್ನೊಳಗೊಂಡ ಹಣಕಾಸು ನೀತಿ ಸಮಿತಿ, ರೆಪೊ ದರವನ್ನು ಬದಲಾಯಿಸದೆ ಶೇಕಡಾ 6.25 ಮತ್ತು ರಿವರ್ಸ್ ರೆಪೊ ದರವನ್ನು ಶೇಕಡಾ 5.75ರಷ್ಟು ಕಾಯ್ದುಕೊಂಡಿದೆ. ಹಳೆಯ 500 ಮತ್ತು 1000ದ ನೋಟುಗಳ ಬಳಕೆ ನಿಷೇಧಿಸಿದ ನಂತರ ಆರ್ ಬಿಐ ಪ್ರಕಟಿಸುತ್ತಿರುವ ಎರಡನೇ ವಿತ್ತೀಯ ನೀತಿಯಾಗಿದೆ.  ವ್ಯವಸ್ಥೆ ಒಂದು ಹಂತಕ್ಕೆ ಹತೋಟಿಗೆ ಬರುತ್ತಿದ್ದಂತೆ ನಗದು ವಿಹ್ ಡ್ರಾ ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಡಿಲಿಸುತ್ತಿದೆ. ಇದೀಗ ಉಳಿತಾಯ ಖಾತೆದಾರರಿಗೆ ಮಾರ್ಚ್ 13ರಿಂದ ಹಣ ತೆಗೆದುಕೊಳ್ಳುವ ಮಿತಿಯನ್ನು ತೆಗೆಯಲಾಗಿದೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin