ಪಾಕಿಸ್ತಾನದಲ್ಲಿ 6.3 ತೀವ್ರತೆಯ ಭಾರೀ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

Pakistan--01

ಇಸ್ಲಾಮಾಬಾದ್, ಫೆ.8-ಪಾಕಿಸ್ತಾನದ ಕರಾವಳಿ ನಗರಿ ಪಾಸ್ನಿ ಬಳಿ ಇಂದು ಮುಂಜಾನೆ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸಾವು-ನೋವು, ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ. ಪಾಸ್ನಿ ನಗರದ ವಾಯುವ್ಯ ದಿಕ್ಕಿಗೆ 23 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಅಮೆರಿಕ ಭೂಗರ್ಭ ಸರ್ವೇಕ್ಷಣಾ ಇಲಾಖೆ (ಯುಎಸ್‍ಜಿಎಸ್) ತಿಳಿಸಿದೆ.  ಕಳೆದ ವರ್ಷ ಏಪ್ರಿಲ್‍ನಲ್ಲಿ ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಯಲ್ಲಿ ಸಂಭವಿಸಿದ 6.6ರಷ್ಟು ತೀವ್ರತೆಯ ಭೂಕಂಪಕ್ಕೆ ಕನಿಷ್ಠ ಆರು ಪಾಕಿಸ್ತಾನಿಯರು ಬಲಿಯಾಗಿದ್ದರು.   ಅಕ್ಟೋಬರ್, 2015ರಂದು ಪಾಕ್ ಮತ್ತು ಆಫ್ಘನ್‍ನಲ್ಲಿ ವಿನಾಶಕಾರಿ ಭೂಕಂಪಕ್ಕೆ 400ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕ ಕಟ್ಟಡಗಳು ನೆಲಸಮವಾಗಿದ್ದವು. ಅಕ್ಟೋಬರ್ 8, 2006ರಂದು ಬಂದೆರಗಿದ 7.6 ತೀವ್ರತೆಯ ಪ್ರಬಲ ಭೂಕಂಪಕ್ಕೆ 73,000 ಜನ ಸಾವಿಗೀಡಾಗಿ, 3.5 ದಶಲಕ್ಷ ಮಂದಿ ನಿರಾಶ್ರಿತರಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin