ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರ ಸಾವು
ವಿಜಯಪುರ, ಫೆ.8- ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಇಂದು ಬೆಳಗ್ಗೆ ಮುದ್ದೇಬಿಹಾಳ ತಾಲೂಕಿನ ಅಯ್ಯನಗುಡಿ ಕ್ರಾಸ್ ಬಳಿ ನಡೆದಿದೆ.ಮೃತರನ್ನು ಮುದ್ದೇಬಿಹಾಳ ಪಟ್ಟಣದವರಾದ ಉಮೇಶ ರಾಠೋಡ (25) ಮತ್ತು ಲಾಲಂಭಾಷ ಮ್ಯಾಗೇರಿ (50) ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹಿರೇಮುರಾಳ ಗ್ರಾಮದ ನಾಗರಾಜ್ ವಗ್ಗರ (45) ಮತ್ತು ಈರಣ್ಣ ನಾಡಗೌಡ್ರ (35) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಳಗ್ಗೆ 6.30ರ ಸಂದರ್ಭದಲ್ಲಿ ವಿರುದ್ಧ ದಿಕ್ಕುಗಳಿಂದ ಬರುತ್ತಿದ್ದ ಎರಡೂ ಬೈಕ್ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ಉರುಳಿ ಬಿದ್ದ ಎಲ್ಲರೂ ತೀವ್ರವಾಗಿ ಗಾಯಗೊಂಡಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಲಾಲಂಭಾಷ ಸ್ಥಳದಲ್ಲೇ ಅಸುನೀಗಿದರು ಎಂದು ಪೊಲೀಸರು ತಿಳಿಸಿದ್ದಾರೆ. ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS