ಶಾಲೆಯ ಕಂಪ್ಯೂಟರ್ ಕೊಠಡಿ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

kr-nagar

ಕೆ.ಆರ್.ನಗರ, ಫೆ.8- ಶಾಲೆಯ ಕಂಪ್ಯೂಟರ್ ಕೊಠಡಿಯನ್ನು ಹಾರೆಯಿಂದ ಮೀಟಿ ಸುಮಾರು 2.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿರುವ ಘಟನೆ ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆಯಲ್ಲಿ ನಡೆದಿದೆ. ಸರ್ಕಾರಿ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯನ್ನು ಹಾರೆಯಿಂದ ಮೀಟಿರುವ ಖದೀಮರು ಕೊಠಡಿಯಲ್ಲಿದ್ದ 1 ಜೆರಾಕ್ಸ್ ಮಿಷೆನ್, 1 ಜನರೇಟರ್, 1 ಕಂಪ್ಯೂಟರ್, 1 ಪ್ರೊಜೇಕ್ಟರ್, 1 ಪ್ರಿಂಟರ್, 6 ಬ್ಯಾಟರಿಗಳನ್ನು ದೋಚಲಾಗಿದೆ.

ನಿನ್ನೆ ಬೆಳಗ್ಗೆ ಶಾಲೆಯ ಬೀಗ ತೆರೆಯುವ ಸಮಯದಲ್ಲಿ ಕಳ್ಳತನ ಪತ್ತೆಯಾಗಿದೆ.ತಕ್ಷಣವೆ ಶಾಲೆಯ ಶಿಕ್ಷಕ ಮತ್ತು ತಾಲ್ಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿ.ಆರ್.ಉದಯ್‍ಕುಮಾರ್ ಕೆ.ಆರ್.ನಗರ ಪೊಲೀಸರಿಗೆ ಮತ್ತು ಕೆ.ಆರ್.ನಗರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಅವರಿಗೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೆ ಮೈಸೂರು ಗ್ರಾಮಾಂತರ ಡಿವೈಎಸ್‍ಪಿ ವಿಕ್ರಂ ಅಮಾಟೆ, ವೃತ್ತ ನಿರೀಕ್ಷಕ ಬಸವರಾಜು, ಅಪರಾಧ ವಿಭಾಗದ ಪಿ.ಎಸ್.ಐ ಬೋರಶೆಟ್ಟಿ, ಮುಖ್ಯ ಪೇದೆ ಸೋಮಶೇಖರ್, ಸಿಬ್ಬಂದಿಗಳಾದ ಅರವಿಂದ, ಯೋಗೇಶ್, ಶ್ರೀಕಂಠ, ಡ್ರೈವರ್ ಶ್ರೀಕಂಠ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಆಗ್ರಹ: ಚುಂಚನಕಟ್ಟೆ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು ಇಲ್ಲಿರುವ ಉಪ ಪೊಲೀಸ್ ಠಾಣೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸುವ ಮೂಲಕ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin