ಹುತಾತ್ಮ ಸಂದೀಪ್ ಕುಟುಂಬಕ್ಕೆ ಪರಿಹಾರ : ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಸೂಚನೆ ಮಂಡಿಸಿದ ಶಾಸಕ ಎಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

sandeep

ಬೆಂಗಳೂರು,ಫೆ.8- ಜಮ್ಮುಕಾಶ್ಮೀರದ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ ಸಂದೀಪ್‍ಕುಮಾರ್ ಶೆಟ್ಟಿ ಕುಟುಂಬಕ್ಕೆ ರಾಜ್ಯ ಸರ್ಕಾರ ನೀಡಿದ ಪರಿಹಾರದ ವಿಚಾರದಲ್ಲಿ ಹಾಸನ ಜಿಲ್ಲಾಡಳಿತ ಮತ್ತು ತಾಲ್ಲೂಕು ತಹಸೀಲ್ದಾರ್ ವಿರುದ್ದ ಹಕ್ಕುಚ್ಯುತಿ ಸೂಚನೆಯನ್ನು ಜೆಡಿಎಸ್ ಹಿರಿಯ ಶಾಸಕ ಎಚ್.ಡಿ.ರೇವಣ್ಣ ವಿಧಾನಸಭೆಯಲ್ಲಿ ಮಂಡಿಸಿದರು.   ಹುತಾತ್ಮ ಸಂದೀಪ್‍ಕುಮಾರ್ ತಮ್ಮ ವಿಧಾನಸಭಾ ಕ್ಷೇತ್ರದವರಾಗಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರಿಂದ ನೀಡಲಾದ 25 ಲಕ್ಷ ರೂ. ಚೆಕನ್ನು ಸ್ಥಳೀಯ ಶಾಸಕರಾದ ತಮ್ಮ ಗಮನಕ್ಕೆ ತಾರದೆ ನೀಡಲಾಗಿದೆ. ಹಾಸನ ಜಿಲ್ಲಾಡಳಿತ ಮತ್ತು ಹಾಸನ ತಾಲ್ಲೂಕಿನ ತಹಸೀಲ್ದಾರ್ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.   ತಾವು ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿದ್ದರೂ ಚೆಕ್ ನೀಡುವ ವಿಚಾರದಲ್ಲಿ ಸ್ಥಳದಲ್ಲೇ ಇದ್ದ ನನ್ನ ಗಮನಕ್ಕೆ ಬರಲಿಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin