ಅಮೆರಿಕದ ರಕ್ಷಣಾ ಸಚಿವ ಜೇಮ್ಸ್ ಮ್ಯಾಟೀಸ್ ಪರಿಕ್ಕರ್ ಮಾತುಕತೆ : ರಕ್ಷಣಾ ಸಹಕಾರ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

America-Manohar-Pari

ವಾಷಿಂಗ್ಟನ್, ಫೆ.9-ರಕ್ಷಣಾ ಸಹಕಾರದಲ್ಲಿ ನಿರಂತರ ಸುಸ್ಥಿರ ಬಾಂಧವ್ಯ ವರ್ಧನೆಗೆ ಭಾರತ ಮತ್ತು ಅಮೆರಿಕ ಇಂದು ದಿಟ್ಟ ಹೆಜ್ಜೆ ಇಟ್ಟಿವೆ. ಅಮೆರಿಕದ ರಕ್ಷಣಾ ಸಚಿವ ಜೇಮ್ಸ್ ಮ್ಯಾಟೀಸ್ ಇಂದು ಭಾರತದ ತಮ್ಮ ಸಹವರ್ತಿ ಮನೋಹರ್ ಪರಿಕ್ಕರ್ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಈ ಮಹತ್ವದ ವಿಷಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ.   ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಮ್ಯಾಟೀಸ್ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಭಾರತದೊಂದಿಗೆ ಮಾತುಕತೆ ನಡೆಸಿದ್ದಾರೆ. ರಕ್ಷಣಾ ಸಹಕಾರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲು ಉಭಯ ನಾಯಕರು ಸಂಪೂರ್ಣ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಕ್ಯಾಪ್ಟನ್ ಜೆಫ್ ಡೇವಿಸ್ ತಿಳಿಸಿದ್ದಾರೆ.

ಅಮೆರಿಕ-ಭಾರತ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ಪ್ರಾಮುಖ್ಯತೆ ಬಗ್ಗೆ ಮ್ಯಾಟೀಸ್ ಮತ್ತು ಪರಿಕ್ಕರ್ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೇ ರಕ್ಷಣಾ ಸಹಕಾರ ಮತ್ತು ಭದ್ರತೆ ವಿಷಯಗಳ ಕುರಿತು ಗಹನವಾದ ಮಾತುಕತೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin