ಆಕೆಯ ತಲೆ ಬುರುಡೆಯಲ್ಲಿತ್ತು ಜೀವಂತ ಜಿರಲೆ..!

ಈ ಸುದ್ದಿಯನ್ನು ಶೇರ್ ಮಾಡಿ

cockroach

ಚೆನ್ನೈ, ಫೆ.9-ನೀವು ರಾತ್ರಿ ಸವಿ ನಿದ್ರೆಯಲ್ಲಿದ್ದಾಗ ನಿಮ್ಮ ಮೂಗಿನ ಮೇಲೆ ಜಿರಲೆ ಓಡಾಡಿದರೆ ದುಃಸ್ವಪ್ನ ಕಂಡವರಂತೆ ಗಾಬರಿಯಿಂದ ಕಿರುಚಾಡುತ್ತೀರಿ, ಕಣ್ಣಿನ ಬಳಿ ಅದು ಹೋಗದಂತೆ ತಡೆಯುತ್ತೀರಿ. ಜಿರಲೆ ಕ್ಷಣಕಾಲ ಓಡಾಡಿದರೆ ನೀವು ಕಕ್ಕಾಬಿಕ್ಕಿಗೆ ಒಳಗಾಗುತ್ತೀರಿ ಅಲ್ಲವೇ ? ಆದರೆ ಈ ಪುಟ್ಟ ಕೀಟವೊಂದು ತಲೆಬುರುಡೆಯೊಳಕ್ಕೇ ನುಸುಳಿದರೆ ? ಚೆನ್ನೈನ ಮಹಿಳೆಯೊಬ್ಬರಿಗೆ ಈ ಅನುಭವವಾಗಿ ಪೀಕಲಾಟ ಅನುಭವಿಸಿದರು.    42 ವರ್ಷದ ಮಹಿಳೆಗೆ ನಿದ್ರಿಸಿ ಎದ್ದಾಗಲೆಲ್ಲ ಆಕೆಯ ಕಣ್ಣಿನ ಹಿಂದೆ ಏನೋ ಓಡಾಡಿದಂತಾಗಿ ಯಾತನೆಯಾಗುತ್ತಿತ್ತು. ಸ್ಥಳೀಯ ಕ್ಲಿನಿಕ್‍ಗೆ ತೆರಳಿದಾಗ ಈಕೆಯ ಮೂಗನ್ನು ಸ್ವಚ್ಚಗೊಳಿಸಿ ವಾಪಸ್ ಕಳುಹಿಸಲಾಯಿತು. ಆದರೆ ಕಣ್ಣಿನ ಬಳಿ ಉಪಟಳ ಕಡಿಮೆಯಾಗಲಿಲ್ಲ.

ತಜ್ಞ ವೈದ್ಯರೊಬ್ಬರು ಆಕೆಯ ಮೂಗಿನೊಳಗೆ ಅತ್ಯಂತ ಸೂಕ್ಷ್ಮ ಸಾಧನ ತೂರಿಸಿ ನೋಡಿದಾಗ ಅಲ್ಲಿ ಕಂಡುಬಂದ ವಾಸ್ತವ ಸಂಗತಿ ನೋಡಿ ಹೌಹಾರಿದರು. ಅಲ್ಲಿ ಪುಟ್ಟ ಕಾಲುಗಳ ಜೀವಿಯೊಂದು ಓಡಾಡುತ್ತಿದ್ದದ್ದು ಕಂಡುಬಂದಿತು ಎಂದು ಚೆನ್ನೈನ ಸ್ಟ್ಯಾನ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಇಎನ್‍ಟಿ ತಜ್ಞ ಡಾ. ಎಂ.ಎನ್. ಶಂಕರ್ ಹೇಳುತ್ತಾರೆ.   ನಂತರ ಅದು ಜಿರಲೆ ಎಂಬುದು ದೃಢಪಟ್ಟು ವ್ಯಾಕ್ಯುಂ ಕ್ಲೀನರ್ (ನಿರ್ವಾತ ಸ್ವಚ್ಚತಾಯಂತ್ರ) ಸಹಾಯದಿಂದ ಮೂಗಿನ ಮೂಲಕ ಐದು ಸೆಂ.ಮೀ. ಸಂಧಿಪದಿಯನ್ನು ಹೊರಗೆ ತೆಗೆಯಲಾಯಿತು..!

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin