ಈ ವಾರ ಥಿಯೇಟರ್ ಗಳಲ್ಲಿ ‘ಮೇಲುಕೋಟೆ ಮಂಜ’ನ ಹವಾ

ಈ ಸುದ್ದಿಯನ್ನು ಶೇರ್ ಮಾಡಿ

1
ಸ್ಯಾಂಡಲ್‍ವುಡ್‍ನಲ್ಲಿ ನವರಸ ನಾಯಕನೆಂದೇ ಕರೆಯಲ್ಪಡುವ ಜಗ್ಗೇಶ್ ನಿರ್ದೇಶನ ಹಾಗೂ ನಟನೆಯಲ್ಲಿ ಸಿದ್ಧವಾಗಿರುವ ಹಾಗೂ ಚಿಪ್ಸ್ ಫ್ಯಾಕ್ಟರಿ ಉದ್ಯಮಿಯಾದ ಕೃಷ್ಣ ಅವರ ನಿರ್ಮಾಣದ ಮೇಲುಕೋಟೆ ಮಂಜ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.ತನ್ನನ್ನು ನಂಬಿ ಬಂಡವಾಳ ಹೂಡಿದವರನ್ನು ಗೆಲ್ಲಿಸಬೇಕೆಂಬ ಉದ್ದೇಶದಿಂದ ನಿರ್ದೇಶಕ ಕಮ್ ನಾಯಕ ಜಗ್ಗೇಶ್ ಈ ಚಿತ್ರದ ಬಿಡುಗಡೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮೂರು ವರ್ಷದ ಹಿಂದೆ ಶುರುವಾದ ಈ ಚಿತ್ರವು ಹಲವು ಕಾರಣಗಳಿಂದ ತಡವಾಗಿದ್ದು, ಈವಾರ ಮುಕ್ತಿ ದೊರೆತಿದೆ. ಸದಾ ಸೋಮಾರಿಯಾಗಿ, ಜವಾಬ್ದಾರಿಯಿಲ್ಲದೆ ಜೀವನ ನಡೆಸುವ ನಾಯಕ, ಒಂದು ಹಂತದಲ್ಲಿ ವಿಪರೀತ ಸಾಲ ಮಾಡಿಕೊಂಡಿರುತ್ತಾನೆ. ಮಾಡಿದ ಸಾಲ ತೀರಿಸಲಾಗದೆ ಹಲವು ಸಂಕಷ್ಟಗಳನ್ನು ಎದುರಿಸಿ, ಅದರಿಂದ ದೂರಾಗಲು ತಪ್ಪಿಸಿಕೊಂಡು ಓಡಾಡುತ್ತಾನೆ.

ಕೊನೆಗೆ ಬದುಕಿನ ಅರ್ಥ ತಿಳಿದುಕೊಂಡು ಹೇಗೆ ಸರಿದಾರಿಗೆ ಬರುತ್ತಾನೆ ಎನ್ನುವುದೇ ಈ ಚಿತ್ರದ ಕಥಾಹಂದರ. ಇದನ್ನು ಹಾಸ್ಯದ ರೂಪದಲ್ಲಿ ನೈಜತೆಗೆ ಹತ್ತಿರವಾಗಿ ತೋರಿಸುವ ಪ್ರಯತ್ನವನ್ನು ನಿರ್ದೇಶಕ ಜಗ್ಗೇಶ್ ಅವರು ಮಾಡಿದ್ದಾರೆ. ಹೆಚ್ಚು ಮಾನಿಟರ್ ಮಾಡದೆ, ಕಲಾವಿದರಿಗೆ ಯಾವುದೇ ತೊಂದರೆ ನೀಡದೆ, ಅಚ್ಚುಕಟ್ಟಾಗಿ 40 ದಿವಸಗಳಲ್ಲಿ ಮೇಲುಕೋಟೆ, ಮೈಸೂರು, ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಹಾಡುಗಳಿಗೆ ಗಿರಿಧರ್ ದಿವಾನ್ ಅವರು ಸಂಗೀತ ಸಂಯೋಜಿಸಿದ್ದು ಅದರಲ್ಲಿ ಹಾಡೊಂದನ್ನು ಜಗ್ಗೇಶ್ ಅವರೇ ಬರೆದಿದ್ದಾರೆ. ನಗಲು ಕಾರಣ ಬೇಕಿಲ್ಲ ಎಂಬ ಮಾತನ್ನು ಹೇಳಿದ ಜಗ್ಗೇಶ್‍ರವರು ಈ ಚಿತ್ರವು ಸಂಪೂರ್ಣ ಮನರಂಜನೆ ಜತೆಗೆ ಹಾಸ್ಯದ ಮಿಶ್ರಣ ಬಹುಪಾಲು ಚಿತ್ರವನ್ನು ಆವರಿಸಿಕೊಂಡಿದೆ.

ಖಂಡಿತ ಈ ಚಿತ್ರ ಸಿನಿ ಪ್ರಿಯರ ಮನಸ್ಸು ಗೆಲ್ಲಲಿದೆ ಎಂಬ ಭರವಸೆ ಹೊಂದಿದ್ದೇನೆ ಎಂದು ಹೇಳಿಕೊಂಡರು.ನಾಯಕನ ತಂದೆ ಹಾಗೂ ಶಿಕ್ಷಕನಾಗಿ ಹಿರಿಯ ನಟ ಶ್ರೀನಿವಾಸ ಪ್ರಭು ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕಿಯಾಗಿ ಐಂದ್ರಿತಾ ರೇ ಮೊದಲ ಬಾರಿಗೆ ಜಗ್ಗೇಶ್ ಜೊತೆ ಅಭಿನಯಿಸಿದ್ದಾರೆ. ಆದರೂ ಚಿತ್ರದ ಪ್ರಚಾರಕ್ಕೆ ಮಾತ್ರ ಗೈರು ಹಾಜರಾಗಿರುವುದು ವಿಪರ್ಯಾಸವೇ ಸರಿ.. ನಾಯಕನ ಹಿತೈಷಿಯ ಪಾತ್ರದಲ್ಲಿ ರಂಗಾಯಣ ರಘು ಬಣ್ಣ ಹಚ್ಚಿದ್ದಾರೆ. ಒಟ್ಟಾರೆ ಅನುಭವಿ ನಟರನ್ನೊಳ ಗೊಂಡಿರುವ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯಲು ಸನ್ನದ್ಧವಾಗಿದೆ. ಸುಮಾರು 60ರಷ್ಟು ಭಾಗವನ್ನು ಮೇಲುಕೋಟೆಯಲ್ಲಿ ಚಿತ್ರೀಕರಿಸಿರುವ ಈ ಚಿತ್ರವು ಬಹಳಷ್ಟು ಹೊಸತನ ಒಳಗೊಂಡಿದೆಯಂತೆ. ಚಿತ್ರದ ಕ್ಲೈಮ್ಯಾಕ್ಸ್ ಬಹಳ ವಿಭಿನ್ನವಾಗಿ ಮೂಡಿಬಂದಿದೆಯಂತೆ. ಒಟ್ಟಾರೆ ಇಡೀ ಚಿತ್ರತಂಡದ ಪ್ರಕಾರ ಮೇಲುಕೋಟೆ ಮಂಜ ಎಲ್ಲರ ಮನ ಗೆಲ್ಲಲಿದೆಯಂತೆ. ಜಗ್ಗೇಶ್ ನಿರ್ದೇಶನದ ಈ ಚಿತ್ರವು ಪ್ರೇಕ್ಷಕರನ್ನು ರಂಜಿಸಲಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin