ಕೇಶವಮೂರ್ತಿ ಪಕ್ಷ ತೊರೆದಿರುವುದು ನೋವು ತಂದಿದೆ

ಈ ಸುದ್ದಿಯನ್ನು ಶೇರ್ ಮಾಡಿ

kalale--keshavamurthy--jds

ನಂಜನಗೂಡು, ಫೆ.9-ಕಳಲೆ ಕೇಶವಮೂರ್ತಿ ಅವರು ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತರಾಗಿದ್ದರು. ಪಕ್ಷದಲ್ಲಿ ಎಲ್ಲರೊಂದಿಗೂ ಸೌಜನ್ಯದಿಂದ ಬೆರೆಯುತ್ತಿದ್ದರು ಅವರು ಪಕ್ಷ ತೊರೆದಿರುವುದು ಕುಮಾರಸ್ವಾಮಿಯವರಿಗೆ ನೋವುಂಟಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ತಿಳಿಸಿದರು.ಕೇಶವಮೂರ್ತಿ ಅವರ ರಾಜೀನಾಮೆ ಪತ್ರ ಸ್ವೀಕರಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ನನಗೂ ಬಹಳ ಬೇಸರವಾಗಿದೆ. ಎಚ್.ಡಿ.ದೇವೇಗೌಡರಿಗೂ ನೋವುಂಟಾಗಿದೆ ಎಂದು ತಿಳಿಸಿದರು.ಕೇಶವಮೂರ್ತಿ ಅವರೋಂದಿಗೆ ನಗರಸಭಾ ಸದಸ್ಯ ಹಾಗೂ ನಗರ ಜೆಡಿಎಸ್ ಅಧ್ಯಕ್ಷ ಎನ್.ಎಂ.ಮಂಜುನಾಥ್ ಹಾಗೂ ಕೆಲವು ಕಾರ್ಯಕರ್ತರು ರಾಜೀನಾಮೆ ನೀಡಿದರು.ಇದೇ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ    ಆರ್.ವಿ.ಮಹಾದೇವ ಸ್ವಾಮಿಯವರನ್ನು ನೂತನ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಲಾಯಿತು.ದೇವಿರಮ್ಮನಹಳ್ಳಿ ಗ್ರಾಪಂ ಸದಸ್ಯ ಬಸವರಾಜು, ವಕೀಲ ಟಿ.ಮುರುಳೀಧರ್(ಸಿಂಹ), ಗುತ್ತಿಗೆದಾರ ನಾಗರಾಜಯ್ಯ, ಪ್ರಸಾದ್, ಸತೀಶ್, ಸುಬ್ರಮಣ್ಯ , ಷಣ್ಮುಗಸ್ವಾಮಿ(ಹಾಲಿವುಡ್)ಮತ್ತಿತರರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin