ಜಯಲಲಿತಾ ಸಾವಿನ ತನಿಖೆ ನಡೆಸಲು ಆಯೋಗ ರಚಿಸುವಂತೆ ಪನ್ವೀರ್ ಸೆಲ್ವಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Jayalalithaa Panneer-Selvam

ಚೆನ್ನೈ, ಫೆ.9- ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಸಾವಿನ ತನಿಖೆ ನಡೆಸಲು ಆಯೋಗ ರಚಿಸುವಂತೆ ಉಸ್ತುವಾರಿ ಮುಖ್ಯಮಂತ್ರಿ ಓ.ಪನ್ವೀರ್‍ಸೆಲ್ವಂ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ.  ಇದೇ ವೇಳೆ ತಮ್ಮ ಅನುಮತಿ ಇಲ್ಲದೆ, ಮುಂದಿನ ಆದೇಶದವರೆಗೂ ಸರ್ಕಾರದ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳ ವ್ಯವಹಾರಕ್ಕೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಹಸ್ತಕ್ಷೇಪ ಮಾಡದಂತೆ ಸೂಚನೆ ನೀಡಿದರೆಂದೂ ತಿಳಿದು ಬಂದಿದೆ.  ರಾಜ್ಯ ರಾಜಕೀಯ ಚಟುವಟಿಕೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಸೆಲ್ವಂ ಇಂದು ತಮ್ಮ ನಿವಾಸದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ಪೋಲೀಸ್ ಮಹಾನಿರ್ದೇಶಕರೊಂದಿಗೆ ಮಹತ್ವದ ಸಭೆ ನಡೆಸಿ ಕಾನೂನು ಮತ್ತು ಆಡಳಿತಾತ್ಮಕ ವಿಷಯಗಳ ಕುರಿತು ಚರ್ಚಿಸಿದರು.

ಮುಖ್ಯ ಕಾರ್ಯದರ್ಶಿ ಗಿರಿಜಾ ವೈದ್ಯನಾಥನ್ ಮತ್ತು ಐಜಿ-ಡಿಜಿಪಿ ಟಿ.ಕೆ.ರಾಜೇಂದ್ರನ್ ಅವರನ್ನು ಇಂದು ಬೆಳಗ್ಗೆ ತಮ್ಮ ನಿವಾಸಕ್ಕೆ ಕರೆಸಿಕೊಂಡ ಸೆಲ್ವಂ, ಕಾನೂನು ಸುವ್ಯವಸ್ಥೆ, ಆಡಳಿತಾತ್ಮಕ ವಿಷಯಗಳ ಬಗ್ಗೆ ಸಮಾಲೋಚಿಸಿದರು ಎಂದು ಮೂಲಗಳು ತಿಳಿಸಿವೆ. ಜಯಲಲಿತಾ ಅವರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಲು ಆಯೋಗ ರಚಿಸುವಂತೆ ಅವರು ಗಿರಿಜಾ ವೈದ್ಯನಾಥನ್  ಅವರಿಗೆ ಸೂಚಿಸಿದರು. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆಯೂ ತಿಳಿಸಿದರು.  ಜಯಲಲಿತಾ ಅವರ ಪೋಯಸ್ ಗಾರ್ಡನ್‍ನಲ್ಲಿರುವ ಬಂಗಲೆಯನ್ನು ಸ್ಮಾರಕವಾಗಿ ಪರಿವರ್ತಿಸುವಂತೆ ಪನ್ವೀರ್ ಸೂಚಿಸಿದರು. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಸ್ಥಿತಿಗತಿ ಬಗ್ಗೆ ಟಿ.ಕೆ.ರಾಜೇಂದ್ರನ್ ಅವರಿಂದ ಮಾಹಿತಿ ಪಡೆದುಕೊಂಡರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin