ತಂದೆಯಿಂದ ಆಸ್ತಿ ಪತ್ರಕ್ಕೆ ಹೆಬ್ಬೆಟ್ಟು ಒತ್ತಿಸಿಕೊಂಡ ಮಗಳು

ಈ ಸುದ್ದಿಯನ್ನು ಶೇರ್ ಮಾಡಿ

ಹೊಸಕೋಟೆ, ಫೆ.9- ಸ್ವಂತ ಮಗಳೇ ತಂದೆಯಿಂದ ಆಸ್ತಿಪತ್ರಕ್ಕೆ ಹೆಬ್ಬೆಟ್ಟು ಒತ್ತಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಜಗದೀಶ್ ಅವರು ವಾಗಟ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ಥ ಆಂಜಿನಪ್ಪ ಅವರಿಂದ ಹೇಳಿಕೆ ಪಡೆದುಕೊಂಡರು. 2006ರಲ್ಲಿ ಸರ್ಕಾರ ಜಾರಿಗೆ ತಂದ ಸೀನಿಯರ್ ಸಿಟಿಜನ್ ಕಾಯ್ದೆಯಡಿ ಸ್ಥಳದಲ್ಲಿಯೇ ನ್ಯಾಯ ಒದಗಿಸುವ ಅಧಿಕಾರವನ್ನು ಉಪವಿಭಾಗಾಧಿಕಾರಿಗಳಿಗೆ ನೀಡಿದ್ದು, ಅದರಂತೆ ಖುದ್ದು ಜಗದೀಶ್ ಅವರು ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ವಾಗಟ ಗ್ರಾಮಕ್ಕೆ ಭೇಟಿ ನೀಡಿ ಆಂಜನಪ್ಪ ಅವರಿಂದ ಪೂರ್ಣ ವಿವರ ಪಡೆದುಕೊಂಡರು.

ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಜಗದೀಶ್, ಯಾವುದೇ ವ್ಯಕ್ತಿಗಳು ಹಿರಿಯ ನಾಗರಿಕರನ್ನು ಸಾಕುತ್ತೇವೆಂದು ವಿಶ್ವಾಸ ಮೂಡಿಸಿ, ನಂಬಿಸಿ ಅವರ ಆಸ್ತಿಗಳನ್ನು ಬರೆಸಿಕೊಂಡು ಅವರನ್ನು ಸಾಕದಿರುವ ಬಗ್ಗೆ ದೂರುಗಳು ಬಂದಲ್ಲಿ ನಾವು ಅಂತಹ ಪ್ರಕರಣಗಳನ್ನು ಕೈಗೆತ್ತಿಕೊಂಡು ಟ್ರಿಬ್ಯೂನಲ್‍ನಲ್ಲಿ ಕೇಸು ದಾಖಲಿಸಿ ಸ್ಥಳದಲ್ಲಿಯೇ ಆದೇಶವನ್ನು ಮಾಡಬಹುದಾಗಿದೆ ಎಂದರು.ಈ ಪ್ರಕರಣ ಒಂದು ವಾರದೊಳಗೆ ಇತ್ಯರ್ಥ ಮಾಡುವುದಾಗಿ ಉಪ ವಿಭಾಗಾಧಿಕಾರಿ ಅವರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಬಿ.ಪ್ರಕಾಶ್, ಗ್ರಾಮ ಲೆಕ್ಕಿಗ ಸಭಾಸ್ಟೀನ್ ಉಪ ವಿಭಾಗಾಧಿಕಾರಿಗಳ ಕಚೇರಿ ಅಧಿಕಾರಿಗಳೂ ಸ್ಥಳದಲ್ಲಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin