ತಮಿಳುನಾಡಿನ ಹೈಡ್ರಾಮಾದಲ್ಲಿ ಹೊಸ ಟ್ವಿಸ್ಟ್ : ವೈದ್ಯರಿಂದಲೇ ಜಯಾ ಸಾವಿನ ತನಿಖೆಗೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

Jayalalithaa

ಚೆನ್ನೈ,ಫೆ.9-ಮತ್ತೊಂದು ಅನಿರೀಕ್ಷಿತ ನಾಟಕೀಯ ಬೆಳವಣಿಗೆಯಲ್ಲಿ ಸ್ವತಃ ಮುಖ್ಯಮಂತ್ರಿ ದಿ. ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರೇ ಅವರ ಸಾವಿನ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸುವುದರೊಂದಿಗೆ ಈಗ ಶಶಿಕಲಾ ನಟರಾಜನ್ ಅವರಿಗೆ ಮತ್ತೊಂದು ಕಂಟಕ ಎದುರಾಗಿದೆ. ಚಿನ್ಮಮ್ಮನ ವಿರುದ್ದ ಸಡ್ಡುಹೊಡೆದು ಸಮರ ಸಾರಿರುವ ಹಂಗಾಮಿ ಮುಖ್ಯಮಂತ್ರಿ ಓ.ಪನ್ನೀರು ಸೆಲ್ವಂ ಅವರಿಗೆ ಈ ಬೆಳವಣಿಗೆಯಿಂದ ಮತ್ತಷ್ಟು ಬಲ ಬಂದಂತಾಗಿದೆ. ಈ ನಡುವೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ಚೆನ್ನೈಗೆ ಆಗಮಿಸಿದ್ದು , ಈಗ ಇಡೀ ದೇಶದ ಚಿತ್ತ ರಾಜ್ಯಪಾಲರ ನಡೆಯತ್ತ ಕೇಂದ್ರಕೃತವಾಗಿದೆ.

ದಿ.ಜಯಲಲಿತಾ ಅವರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಅವರನ್ನು ನೋಡಿಕೊಳ್ಳುತ್ತಿದ್ದ ಖ್ಯಾತ ವೈದ್ಯ ಡಾ.ಎಂ.ಎನ್.ಶಂಕರ್ ಒತ್ತಾಯಿಸುವ ಮೂಲಕ ಈ ವಿವಾದ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ.

ವೈದ್ಯರು ಹೇಳುವುದೇನು?:

ತಾವು ವಿದೇಶದಲ್ಲಿದ್ದಾಗ ಜಯಲಲಿತಾ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಟಕೀಯ ಬೆಳವಣಿಗೆಯಲ್ಲಿ ಅವರಿಗೆ ಬೇರೆ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ಸಂದರ್ಶನವೊಂದರಲ್ಲಿ ತಿಳಿಸಿರುವ ಅವರು, ತಾವು ಪೂರ್ಣದಲ್ಲಿ ಚಿಕಿತ್ಸೆ ಮುಂದುವರೆಸಿದ್ದರೆ ಜಯಾ ಅವರು ಖಂಡಿತ ಬದುಕುತ್ತಿದ್ದರು ಎಂದು ಅವರು ವಿಶ್ವಾಸದಿಂದ ನುಡಿದಿದ್ದಾರೆ.  ತಾವು ವಿದೇಶದಲ್ಲಿದ್ದಾಗ ಈ ಬೆಳವಣಿಗೆ ಬಗ್ಗೆ ಆತಂಕಗೊಂಡು ಹಲವಾರು ಬಾರಿ ಚೆನ್ನೈನ ಅಪೋಲೋ ಆಸ್ಪತ್ರೆ ಮತ್ತು ಸಂಬಂಧಪಟ್ಟ ವೈದ್ಯರಿಗೆ ದೂರವಾಣಿ ಕರೆ ಮಾಡಿದ್ದೆ. ಆದರೆ ಕರೆಗಳನ್ನು ಸ್ವೀಕರಿಸಲಿಲ್ಲ ಎಂದಿರುವ ಅವರು, ಜಯಾ ಅವರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆದರೆ ಸತ್ಯಾಂಶ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin