ದಢೂತಿ ವ್ಯಕ್ತಿ ದೇಹದಿಂದ 59 ಕೆಜಿ ಬೃಹತ್ ದುರ್ಮಾಂಸದ ಗಡ್ಡೆ ಹೊರಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Fat-Man-1

ಬೇಕರ್‍ಫೀಲ್ಡ್ (ಕ್ಯಾಲಿಫೋರ್ನಿಯಾ), ಫೆ.9-ವೈದ್ಯಲೋಕಕ್ಕೆ ಅತ್ಯಂತ ಸವಾಲು ಮತ್ತು ಕಿಷ್ಟಕರವಾದ ಶಸ್ತ್ರಚಿಕಿತ್ಸೆಯೊಂದು ಅಮೆರಿಕದಲ್ಲಿ ನಡೆದಿದೆ. ವ್ಯಕ್ತಿಯ ದೇಹದಲ್ಲಿದ್ದ 59 ಕೆಜಿ ಬೃಹತ್ ದುರ್ಮಾಂಸದ ಗಡ್ಡೆಯನ್ನು ಭಾರತೀಯ ಮೂಲದ ವೈದ್ಯರ ನೇತೃತ್ವದ ತಂಡವು ತೆಗೆದುಹಾಕುವಲ್ಲಿ ಸಫಲವಾಗಿದೆ.  ಮಿಸ್ಸಿಸ್ಸಿಪಿಯ 57 ವರ್ಷದ ರೋಜರ್ ಲೋಗನ್ ದೇಹದಿಂದ ಭಾರೀ ಟ್ಯೂಮರ್‍ನನ್ನು ತೆಗೆಯಲು ಬೇಕರ್‍ಫೀಲ್ಡ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ಜ.31ರಂದು ಅತಿ ಜಟಿಲ ಶಸ್ತ್ರಕ್ರಿಯೆ ನಡೆಸಲಾಯಿತು. ವಿಫುಲ್ ದೇವ್ ಮಾರ್ಗದರ್ಶನದಲ್ಲಿ ನಡೆದ ಈ ಸರ್ಜರಿ ವೈದ್ಯಲೋಕದಲ್ಲಿ ವಿಸ್ಮಯ ಮೂಡಿಸಿದ ಶಸ್ತ್ರಚಿಕಿತ್ಸೆಗಳಲ್ಲಿ ಒಂದೆನಿಸಿದೆ.

Fat-Man--01

ಹತ್ತು ವರ್ಷದ ಹಿಂದೆ ರೋಜರ್ ದೇಹದ ಕಿಬ್ಬೊಟ್ಟೆಯಲ್ಲಿ ಬೆಳೆಯಲು ಆರಂಭವಾದ ಈ ಗಡ್ಡೆ ಕುಳಿತುಕೊಳ್ಳುವಾಗ ನೆಲ ಮುಟ್ಟುವ ರೀತಿಯಲ್ಲಿ ದೊಡ್ಡದಾಗಿ ಬೆಳೆದಿತ್ತು. ಇದರಿಂದ ಗೃಹಬಂಧನದಂಥ ಪರಿಸ್ಥಿತಿಗೆ ಸಿಲುಕಿದ್ದ ರೋಜರ್ ಕೊಠಡಿಯಲ್ಲಿ ಗೋಡೆಗೆ ಒರಗಿ ಕುಳಿತು ಸಂಕಷ್ಟದ ದಿನಗಳನ್ನು ದೂಡುತ್ತಿದ್ದರು. ಈಗ ಗೆಡ್ಡೆಯಿಂದ ವಿಮೋಚನೆ ಪಡೆದಿರುವ ಅವರ ಮೊಗದಲ್ಲಿ ಮಂದಹಾಸ ಮಿನುಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin