ನಾಗರಹೊಳೆ ಅಭಯಾರಣ್ಯದಲ್ಲಿ ಅಪರೂಪದ ಕರಿ ಚಿರತೆ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Blac-leopard--01

ಹುಣಸೂರು, ಫೆ.9- ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಭಾಗದ ಕೆ.ಎಂ.ಕೊಲ್ಲಿ ಬಳಿ ಅಪರೂಪದ ತಳಿಯ ಕಪ್ಪು ಚಿರತೆ ಶವ ಪತ್ತೆಯಾಗಿದೆ. ವನ್ಯಜೀವಿ ವಲಯದ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಸಂಜೆ ಸುಮಾರು 5 ಗಂಟೆ ಸಮಯದಲ್ಲಿ 6 ತಿಂಗಳ ಚಿರತೆಯ ಶವ ಗೋಚರಿಸಿದೆ.  ಸ್ಥಳದಲ್ಲಿ ಹುಲಿಯ ಹೆಜ್ಜೆ ಗುರುತು, ಚಿರತೆಯ ತಲೆಯಲ್ಲಿ ಗಾಯ ಹಾಗೂ ತಲೆಯ ಮೂಳೆ ಮುರಿದಿರುವುದು ಹುಲಿ ದಾಳಿಗೆ ಸಿಲುಕಿ ಸಾವನ್ನಪ್ಪಿರಬಹುದೆಂಬ ಶಂಕೆಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕುಮಾರ್ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ನಾಗರಹೊಳೆ ಅಭಯಾರಣ್ಯದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹುಲಿ ಸಂರಕ್ಷಣಾ ಯೋಜನೆ ನಿರ್ದೇಶಕ ಮಣಿಕಂಠನ್, ಡಾ.ಉಮಾಶಂಕರ್, ಗ್ರಾಪಂ ಅಧ್ಯಕ್ಷ ಶಿವಣ್ಣ, ಜಿಪಂ ಸದಸ್ಯೆ ಪಂಕಜಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin