ಮನೆ ನಿರ್ಮಾಣಕ್ಕೆ ಅನುಮತಿ ಕೊಡುವುದಕ್ಕೆ ಲಂಚದ ಬೇಡಿಕೆ : ಎಸಿಬಿ ಬಲೆಗೆ ಬಿಲ್ ಕಲೆಕ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

ಮುದ್ದೇಬಿಹಾಳ,ಫೆ.9- ಮನೆ ನಿರ್ಮಾಣಕ್ಕೆ ಅನುಮತಿ ಕೊಡುವುದಕ್ಕೆ ಲಂಚದ ಬೇಡಿಕೆ ಇಟ್ಟಿದ್ದ ಬಿಲ್ ಕಲೆಕ್ಟರ್‍ರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.ತಾಲೂಕಿನತುಂಬಗಿಗ್ರಾಪಂ ಬಿಲ್ ಕಲೆಕ್ಟರ್ ಮಡಿವಾಳಯ್ಯ ಸಗರಮಠ ಎಸಿಬಿ ಬಲೆಗೆ ಬಿದ್ದವರು.ಗ್ರಾಪಂ ವ್ಯಾಪ್ತಿಯ ಪತ್ತೇಪೂರಗ್ರಾಮದಲ್ಲಿದಾವಲಸಾಬ ಇಮಾಮಸಾಬ ಸಗರಅವರುತಮ್ಮ ಹೆಂಡತಿಯ ಹೆಸರಿನಲ್ಲಿದ್ದ ಮನೆಯ ಪಕ್ಕದಖಾಲಿ ನಿವೇಶನ ಇದ್ದು, ಅಲ್ಲಿ ಮನೆ ನಿರ್ಮಾಣಕ್ಕೆಅನುಮತಿಕೋರಿಅರ್ಜಿ ಸಲ್ಲಿಸಿದ್ದರು.ಇದಕ್ಕೆ ಬಿಲ್ ಕಲೆಕ್ಟರ್ ಮಡಿವಾಳಯ್ಯ ಸಗರಮಠ ಮನೆ ನಿರ್ಮಾಣಕ್ಕೆಅನುಮತಿ ನೀಡಲು 15,000 ರೂ.ಲಂಚದ ಬೇಡಿಕೆಇಟ್ಟಿದ್ದರು.

ಈ ಕುರಿತುದೂರುದಾರದಾವಲಸಾಬ ಸಗರಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿನಿನ್ನೆ ಮಧ್ಯಾಹ್ನ ಲಂಚ ಸ್ವೀಕರಿಸುತ್ತಿದ್ದ ವೇಳೆ ಅವರು ಸಿಕ್ಕಿ ಬಿದ್ದಿದ್ದಾರೆ. ಬಿಲ್ ಕಲೆಕ್ಟರ್ ವಿರುದ್ಧ ಭ್ರಷ್ಟಾಚಾರತಡೆಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದು, ವಿಜಯಪುರಜಿಲ್ಲಾ ಪೊಲೀಸ್‍ಠಾಣೆಯಲ್ಲಿ ಪ್ರಕರಣದತನಿಖೆ ಮುಂದುವರೆದಿದೆಎಂದು ಎಸಿಬಿ ಡಿಎಸ್‍ಪಿ ಮಲ್ಲೇಶದೊಡಮನಿ ತಿಳಿಸಿದ್ದಾರೆ.ದಾಳಿಯ ವೇಳೆ ಪಿಎಸೈಗಳಾದ ಎನ್. ಲೋಕೇಶ್, ಮಲ್ಲಯ್ಯ ಮಠಪತಿ ಮತ್ತಿತರರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin