‘ರೇಪ್ ರಾಜಧಾನಿ’ ದೆಹಲಿಯಲ್ಲಿ ಒಂದೇ ತಿಂಗಳಲ್ಲಿ 140 ಅತ್ಯಾಚಾರ ಪ್ರಕರಣಗಳು ದಾಖಲು..!

ಈ ಸುದ್ದಿಯನ್ನು ಶೇರ್ ಮಾಡಿ

Gang-Rape-02

ನವದೆಹಲಿ, ಫೆ.9-ಭಾರತದ ರೇಪ್ ಕ್ಯಾಪಿಟಲ್ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ರಾಜಧಾನಿ ನವದೆಹಲಿಯಲ್ಲಿ ಈ ವರ್ಷ ಜನವರಿ ತಿಂಗಳೊಂದರಲ್ಲೇ 140 ಅತ್ಯಾಚಾರ ಪ್ರಕರಣಗಳು ಮತ್ತು 238 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿದೆ. ಇವುಗಳಲ್ಲಿ ಕ್ರಮವಾಗಿ 43 ಮತ್ತು 133 ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ.   ರಾಜ್ಯಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಈ ಆತಂಕಕಾರಿ ಮಾಹಿತಿ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ಹನ್ಸ್‍ರಾಜ್ ಆಹೀರ್, 2016ರಲ್ಲಿ ಪೊಲೀಸರು ಒಟ್ಟು 2,155 ಅತ್ಯಾಚಾರ ಹಾಗೂ 4,166 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.  ದೆಹಲಿ ಪೊಲೀಸರ ವಿರುದ್ಧ ಕಳೆದ ಮೂರು ವರ್ಷಗಳ ಅವಧಿಯಲ್ಲಿ 36 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಇವುಗಳ ವಿಚಾರಣೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin