ಹೆಲ್ಮೆಟ್ ಸಿಗದೆ ಜನರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಫೆ.9- ನ್ಯಾಯಾಂಗ ಇಲಾಖೆಯ ಆದೇಶದ ಮೇರೆಗೆ ನಗರ ಪೊಲೀಸರು ಹೆಲ್ಮೇಟ್ ಕಡ್ಡಾಯಕ್ಕೆ ಅವಿರತ ಪ್ರಯತ್ನ ನಡೆಸಿದ್ದು, ಜನತೆಗೆ ಹೆಲ್ಮೇಟ್ ಸಿಗದೆ ಪರದಾಡುತ್ತಿದ್ದಾರೆ.
ವಾರದಲ್ಲೇ ನಗರದ ಎಲ್ಲ ಅಂಗಡಿಗಳಲ್ಲಿ ಹೆಲ್ಮೇಟ್ ವಿಪರೀತ ಮಾರಾಟವಾಗಿದ್ದು, ಜನತೆಗೆ ಈಗ ಐಎಸ್‍ಐ ಮಾಕ್ರ್ಡ್ ಹೆಲ್ಮೇಟ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ.
ಜಿಲ್ಲಾಸ್ಪತ್ರೆ, ಕಲಾಮಂದಿರ, ಖಾಸಗಿ ಆಸ್ಪತ್ರೆ ಸೇರಿದಂತೆ ಅಧಿಕೃತ ಮಾರಾಟ ಮಳಿಗೆಯ ಗುಣಮಟ್ಟದ ಹೆಲ್ಮೆಟ್ ಸಿಗದ್ದರಿಂದ ಜನತೆ ರಸ್ತೆ ಬದಿಯ ಕಳಪೆ ದರ್ಜೆಯ ಹೆಲ್ಮೆಟ್ ಪೊಲೀಸರ ತಪಾಸಣೆಯ ದಂಡದಿಂದ ತಪ್ಪಿಸಿಕೊಳ್ಳಲು ಉಪಯೋಗಿಸುತ್ತಿದ್ದು, ಈಗ ಅಂಥ ಹೆಲ್ಮೇಟ್‍ಗಳು ಸಹ ಸಿಗುತ್ತಿಲ್ಲ.ಕೆಲವರು ಗೋವಾ, ಹುಬ್ಬಳ್ಳಿ ಧಾರವಾಡ, ಪೂನಾ, ಕೊಲ್ಲಾಪುರಗಳಿಗೆ ತೆರಳಿ ತಿರುಗಿ ಬರುವಾಗ ಖರೀದಿಸಿ ತರುತ್ತಿದ್ದಾರೆ. ಹೆಲ್ಮೇಟ್ ಮಾರಾಟಗಾರರಿಗೆ ಸುಗ್ಗಿಯಾದರೆ, ಪೊಲೀಸರಿಗೆ ತಪಾಸಣೆ ಅನಿವಾರ್ಯತೆ, ಜನತೆಗೆ ಧರ್ಮಸಂಕಟ ನಗರದಲ್ಲಿ ಶುರುವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin