ತೋಟದ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Murdenz'kmld-vsdvm

ಚೇಳೂರು, ಫೆ.10– ತೋಟದ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಉಪ್ಪಿನಹಳ್ಳಿ ಗ್ರಾಮದಲ್ಲಿ ನಡೆದಿದೆ.  ಅಡವೀಶ ಮತ್ತು ಪಾರ್ವತಮ್ಮ ಕೊಲೆಯಾಗಿರುವ ವೃದ್ಧ ದಂಪತಿ. ಮಾದೇನಹಳ್ಳಿ ಮಜರೆಯ ಉಪ್ಪಿನಹಳ್ಳಿ ಗ್ರಾಮದ ಹೊರ ಭಾಗದಲ್ಲಿರುವ ತೋಟದ ಮನೆಯಲ್ಲಿ ವೃದ್ಧ ದಂಪತಿ ವಾಸವಿದ್ದರು.
ರಾತ್ರಿ ದುಷ್ಕರ್ಮಿಗಳು ತೋಟದ ಮನೆಗೆ ಹೋಗಿ ವೃದ್ಧ ದಂಪತಿಯನ್ನು ಕೊಲೆಮಾಡಿ ಪರಾರಿಯಾಗಿದ್ದಾರೆ. ಇಂದು ಮಧ್ಯಾಹ್ನ ಗ್ರಾಮಸ್ಥರೊಬ್ಬರು ತೋಟದ ಮನೆಗೆ ಹೋದಾಗ ವೃದ್ಧ ದಂಪತಿ ಕೊಲೆಯಾಗಿರುವುದುಗೊತ್ತಾಗಿದೆ.  ಗ್ರಾಮಸ್ಥರಿಂದ ಸುದ್ದಿ ತಿಳಿದು ಚೇಳೂರು ಠಾಣೆ ಪೊಲೀಸರು, ಡಿವೈಎಸ್‍ಪಿ, ಸಿಪಿಐ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು
ವೃದ್ಧ ದಂಪತಿಯನ್ನು ಯಾರು, ಏತಕ್ಕಾಗಿ ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin