ಮುಸ್ಲಿಂ ವಲಸೆ ನಿರ್ಬಂಧ : ಅಧ್ಯಕ್ಷ ಟ್ರಂಪ್‍ಗೆ ಮತ್ತೊಂದು ಹಿನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ಸ್ಯಾನ್‍ಫ್ರಾನ್ಸಿಸ್ಕೋ, ಫೆ.10-ಏಳು ಮುಸ್ಲಿಂ ದೇಶಗಳ ಪ್ರಜೆಗಳಿಗೆ ನಿರ್ಬಂಧ ವಿಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ವಿವಾದಿತ ಆದೇಶವನ್ನು ಯಥಾಸ್ಥಿತಿಗೆ ತರಲು ಅಮೆರಿಕದ ಮೇಲ್ಮನವಿಗಳ ನ್ಯಾಯಾಲಯವೊಂದು ನಿರಾಕರಿಸಿದೆ. ಈ ವಿಷಯದಲ್ಲಿ ನ್ಯಾಯಾಲಯಗಳು ಮತ್ತು ನ್ಯಾಯಾಧೀಶರ ವಿರುದ್ಧ ನಿರಂತರ ಕೆಂಡ ಕಾರುತ್ತಿದ್ದ ಟ್ರಂಪ್‍ಗೆ ಮತ್ತೊಮ್ಮೆ ಭಾರೀ ಹಿನ್ನಡೆಯಾಗಿದೆ. ಸ್ಯಾನ್‍ಫ್ರಾನ್ಸಿಸ್ಕೋದ ಫೆಡರಲ್ ಅಪೀಲ್ಸ್ ಕೋರ್ಟ್‍ನ ಮೂವರು ನ್ಯಾಯಾಧೀಶರ ಪೀಠ, ಟ್ರಂಪ್‍ರ ವಿವಾದಾತ್ಮಕ ವಲಸೆ ಆದೇಶವನ್ನು ಯಥಾಸ್ಥಿತಿಗೆ ತರಲು ನಿರಾಕರಿಸಿತು. ಅಲ್ಲದೇ ಇದನ್ನು ಪುನರ್ ಪರಾಮರ್ಶೆ ಮಾಡುವ ಸಾಧ್ಯತೆಯನ್ನೂ ತಳ್ಳಿಹಾಕಿತು.   ದೇಶದೊಳಗೆ ಇಸ್ಲಾಂ ಭಯೋತ್ಪಾದಕರ ಪ್ರವೇಶ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯ ಎಂಬ ಟ್ರಂಪ್ ವಾದಕ್ಕೆ ನ್ಯಾಯಾಲಯ ಮನ್ನಣೆ ನೀಡಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin