ಅಮೆರಿಕ ವಿರುದ್ಧ ಇರಾನ್‍ನಲ್ಲಿ ಭಾರೀ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ಟೆಹರಾನ್, ಫೆ.11-ಇರಾನ್ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಸಂದೇಶವನ್ನು ಖಂಡಿಸಿ ಲಕ್ಷಾಂತರ ಇರಾನಿಯನ್ನರು ದೇಶದ ವಿವಿಧೆಡೆ ಬೃಹತ್ ಪ್ರತಿಭಟನೆಗಳನ್ನು ಮುಂದುವರಿಸಿದ್ದಾರೆ.  ರಾಜಧಾನಿ ಟೆಹರಾನ್‍ನಲ್ಲಿ ನಿನ್ನೆ ಲಕ್ಷಾಂತರ ಮಂದಿ ಬೀದಿಗಿಳಿದು ಟ್ರಂಪ್ ಸರ್ಕಾರದ ವಿರುದ್ದ ಇರಾನ್ ಸರ್ಕಾರ ಕೈಗೊಂಡ ಪ್ರತಿಭಟನಾ ನಿಲುವಿಗೆ ಭಾರೀ ಬೆಂಬಲ ಸೂಚಿಸಿದರು.   ಅಜಾದಿ ಚೌಕ್‍ನತ್ತ ಪ್ರವಹಿಸಿದ ಜನಸಾಗರವು ಅಮೆರಿಕ ಮತ್ತು ಟ್ರಂಪ್ ವಿರುದ್ಧ ಘೋಷಣೆಗಳನ್ನು ಕೂಗಿತು. ಭಿತ್ತಿಪತ್ರಗಳನ್ನು ಹಿಡಿದಿದ್ದ ಪ್ರತಿಭಟನಕಾರರು ಟ್ರಂಪ್‍ಗೆ ಸಾವು ಬರಲಿ ಎಂದು ಕೂಗುತ್ತಿದ್ದರು. ಇದೇ ಸಂದರ್ಭದಲ್ಲಿ ಇರಾನ್ ಸೇನಾ ಬ್ಯಾಂಡ್ ಕ್ರಾಂತಿ ಗೀತೆಗಳನ್ನು ಹಾಡಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin