ಆಸ್ಪತ್ರೆಗೆ ಬಂದಾಗಲೇ ಜಯಲಲಿತಾ ಸಾವನ್ನಪ್ಪಿದ್ದರು..! ವೈದ್ಯೆ ರಾಮ್‍ಸೀತಾ ಬಾಂಬ್

ಈ ಸುದ್ದಿಯನ್ನು ಶೇರ್ ಮಾಡಿ

Jayalalithaa--01

ಚೆನ್ನೈ, ಫೆ.11- ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಕಳೆದ ವರ್ಷ ಸೆಪ್ಟೆಂಬರ್ 22ರಂದು ಅಪೋಲೊ ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು ಎಂದು ಅದೇ ಆಸ್ಪತ್ರೆಯ ವೈದ್ಯೆ ಡಾ.ರಾಮ್‍ಸೀತಾ ಬಹಿರಂಗ ಹೇಳಿಕೆ ನೀಡಿದ್ದಾರೆ.  ಇದರೊಂದಿಗೆ ಜಯಾ ಸಾವಿನ ಸುತ್ತ ಇರುವ ಅನುಮಾನಗಳು ಇನ್ನಷ್ಟು ದಟ್ಟವಾಗುತ್ತಿದೆ.   ಆ ದಿನ ನಾನು ಆಸ್ಪತ್ರೆಯಲ್ಲಿದ್ದೆ. ಅಂದು ಜಯಾ ಅವರನ್ನು ಆಸ್ಪತ್ರೆಗೆ ಕರೆತಂದಾಗ ಅವರ ಉಸಿರು ನಿಂತಿತ್ತು. ಅವರು ಆಗಲೇ ಮೃತಪಟ್ಟಿದ್ದರು. ಮೃತದೇಹವನ್ನು ಸಂರಕ್ಷಿಸುವ ಕೆಲಸಗಳು ನಡೆಯುತ್ತಿದ್ದವು. ಅದಕ್ಕಾಗಿ ವಿದೇಶಿ ವೈದ್ಯರನ್ನು ಕರೆಸಲಾಯಿತು ಎಂದು ಅವರು ಹೇಳಿಕೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin