ಗೂಗಲ್ ಸರ್ಚ್ ಮಾಡುವುದು, ಬೇರೆಯವರ ಬಾತ್‍ರೂಂಗಳಲ್ಲಿ ಇಣುಕಿ ನೋಡುವುದೇ ಮೋದಿ ಕೆಲಸ : ರಾಹುಲ್ ಲೇವಡಿ

ಈ ಸುದ್ದಿಯನ್ನು ಶೇರ್ ಮಾಡಿ

Modi-vs-Rahul

ಲಕ್ನೊ, ಫೆ.11-ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ರೆನ್‍ಕೋಟ್ ಹಾಕಿಕೊಂಡು ಸ್ನಾನ ಮಾಡುವ ಕಲೆ ಚೆನ್ನಾಗಿ ತಿಳಿದಿದೆ ಎಂದು ವ್ಯಂಗವಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಉಪಾಧ್ಯಾಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಪ್ರಧಾನಿಯವರಿಗೆ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಜನರು ಬಾತ್‍ರೂಂಗಳಲ್ಲಿ ಏನು ಮಾಡುತ್ತಾರೆ ಎಂಬುದನ್ನು ಇಣುಕಿ ನೋಡುವುದರಲ್ಲೇ ಹೆಚ್ಚು ಆಸಕ್ತಿ ಇದೆ ಎಂದು ಲೇವಡಿ ಮಾಡಿದ್ದಾರೆ.   ಉತ್ತರಪ್ರದೇಶ ವಿಧಾನಸಭೆ ಚುನಾವಣಾ ಫಲಿತಾಂಶಗಳು ಹೊರಬಿದ್ದರೆ ಪ್ರಧಾನಿಯವರಿಗೆ ಗರ ಬಡಿದಂತಾಗುತ್ತದೆ ಎಂದೂ ರಾಹುಲ್ ಟೀಕಿಸಿದ್ದಾರೆ.

ಲಕ್ನೋದಲ್ಲಿ ಇಂದು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಮೋದಿ ಅವರಿಗೆ ಜನರ ಹಿತಾಸಕ್ತಿಗಾಗಿ ಕೆಲಸ ಮಾಡಲು ಆಸಕ್ತಿ ಇಲ್ಲ. ಬದಲಿಗೆ ಜಾತಕ ಓದುವುದು, ಗೂಗಲ್ ಸರ್ಚ್ ಮಾಡುವುದು ಮತ್ತು ಜನರು ಸ್ನಾನದ ಕೊಠಡಿಗಳಲ್ಲಿ ಏನು ಮಾಡುತ್ತಾರೆ ಎಂಬುದನ್ನು ನೋಡುವುದೇ ಅವರ ಕಾಯಕವಾಗಿದೆ ಎಂದು ಹರಿಹಾಯ್ದರು.  ಪ್ರಧಾನಮಂತ್ರಿ ಹುದ್ದೆಯಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಬಡವರ ಹಿತರಕ್ಷಣೆಗಾಗಿ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ಎಡವಿದ್ದಾರೆ ಎಂದು ಅವರ ವೈಫಲ್ಯತೆಗಳನ್ನು ಪಟ್ಟಿ ಮಾಡಿದರು.

ಇದೇ ಸಂದರ್ಭದಲ್ಲಿ ರಾಹುಲ್ ಮತ್ತು ಅಖಿಲೇಶ್ ಕಾಂಗ್ರೆಸ್-ಎಸ್‍ಪಿ ಮೈತ್ರಿಕೂಟದ 10-ಅಂಶಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ಬಿಡುಗಡೆ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin