ಚಿಕಿತ್ಸಗಾಗಿ ಈಜಿಪ್ಟ್’ನಿಂದ ಮುಂಬೈಗೆ ಬಂದ 500 ಕೆಜಿ ತೂಕದ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

Women--01

ಮುಂಬೈ, ಫೆ.12-ವಿಶ್ವದ ಅತ್ಯಂತ ಭಾರೀ ತೂಕದ ಈಜಿಪ್ಟ್ ನ 36 ವರ್ಷದ ಎಮಾನ್ ಅಹಮದ್ ತೂಕ ಇಳಿಕೆ ಶಸ್ತ್ರಚಿಕಿತ್ಸೆಗೆ ಒಳಪಡಲು ಇಂದು ಮುಂಜಾನೆ ವಿಶೇಷ ವಿಮಾನದಲ್ಲಿ ಮುಂಬೈಗೆ ಆಗಮಿಸಿದರು. ಈಜಿಪ್ಟ್ ಏರ್ ವಿಮಾನದಲ್ಲಿ ಇಂದು ಬೆಳಿಗ್ಗೆ 4 ಗಂಟೆಗೆ ಮುಂಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿದ ಅವರನ್ನು ವಿಶೇಷ ವಾಹನದ ಮೂಲಕ ಸೈಫಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.   25 ವರ್ಷಗಳ ಕಾಲ ಮನೆಯಿಂದ ಹೊರಗೆ ಬರದಿದ್ದ ಅವರಿಗೆ ಇದೇ ಮೊದಲ ಬಾರಿಗೆ ಹೊರ ಪ್ರಪಂಚದ ಅರಿವಾಗಿದೆ. ಎಮಾನ್‍ರ ಭಾರೀ ದೇಹ ತೂಕವನ್ನು ತಗ್ಗಿಸಲು ಬ್ಯಾರಿಯಾಟಿಕ್ ಶಸ್ತ್ರಚಿಕಿತ್ಸೆ ನಡೆಸುವುದಕ್ಕೂ ಮೊದಲು ಅವರನ್ನು ಒಂದು ತಿಂಗಳ ಕಾಲ ವೀಕ್ಷಣಾ ವ್ಯವಸ್ಥೆಯಲ್ಲಿಡಲಾಗುವುದು.

ಆನಂತರ ಮುಂಬೈ ಮೂಲದ ಬ್ಯಾರಿಯಾಟ್ರಿಕ್ ಸರ್ಜನ್ ಮುಫಜಲ್ ಲಕ್‍ಡವಾಲಾ ಮತ್ತು ಅವರ ತಂಡವು ಸರ್ಜರಿ ನಡೆಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin